ತೆಂಗಿನಕಾಯಿ ಒಂದಕ್ಕೆ 55 ರೂಪಾಯಿ | ಲಾಕ್ಡೌನ್ ಹಿನ್ನೆಲೆ ಏರಿಕೆಯಾದ ತೆಂಗಿನಕಾಯಿ ಬೆಲೆ
25 ರೂಪಾಯಿಗೆ ಸಿಗುತ್ತಿದ್ದ ತೆಂಗಿನಕಾಯಿಯೊಂದಕ್ಕೆ ಈಗ ಬರೋಬ್ಬರಿ 55 ರೂಪಾಯಿ ಆಗಿದೆ.
ಸದ್ಯಕ್ಕೆ ಈ ಬೆಲೆ ಇರೋದು ಇಲ್ಲಲ್ಲ..ನಮ್ಮ ಪಕ್ಕದ ರಾಜ್ಯ ಗೋವಾದಲ್ಲಿ.
ಗೋವಾ ರಾಜಧಾನಿ ಪಣಜಿಯಲ್ಲಿ ದೊಡ್ಡ ಗಾತ್ರದ ತೆಂಗಿನ ಕಾಯಿಯನ್ನು 55 ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆಯಂತೆ.
ಗೋವಾಕ್ಕೆ ತೆಂಗಿನಕಾಯಿ ಆಮದಾಗುತ್ತಿದ್ದದ್ದು ಕೇರಳ ಹಾಗೂ ಕರ್ನಾಟಕದಿಂದ.
ಸದ್ಯ ಲಾಕ್’ಡೌನ್ ಹಿನ್ನೆಲೆಯಲ್ಲಿ ತೆಂಗಿನಕಾಯಿ ಆವಶ್ಯಕತೆ ಇರುವ ಪ್ರಮಾಣದಲ್ಲಿ ಸಿಗುತ್ತಿಲ್ಲ.
ಹಾಗಾಗಿ 25 ರೂ.ಗಳಿಗೆ ಸಿಗುತ್ತಿದ್ದ ದೊಡ್ಡ ಗಾತ್ರದ ತೆಂಗಿನಕಾಯಿ ಈಗ 55 ರೂ.ಗಳಿಗೆ ತಲುಪಿದೆ.
ತೆಂಗಿನಕಾಯಿ ಉತ್ಪಾದನೆ ಮತ್ತು ಆವಕ ಕಡಿಮೆಯಾಗಿರುವುದರಿಂದ ತೆಂಗಿನ ಕಾಯಿಯ ದರದಲ್ಲಿ ಭಾರೀ ಹೆಚ್ಚಳವಾಗಿದೆ ಎಂದು ಹೇಳುತ್ತಾರೆ ವ್ಯಾಪಾರಿಗಳು. ಇತ್ತ ಒಕ್ಕಣ್ಣ ಅಡಿಕೆಗೆ ಚಿನ್ನದ ಬೆಲೆ ಬಂದಿದೆ. ಅತ್ತ ಮುಕ್ಕಣ್ಣ ತೆಂಗಿನಕಾಯಿಗೆ ಬೆಲೆ ಏರುತ್ತಿದೆ. ಅಡಿಕೆ ಮತ್ತು ತೆಂಗು ಬೆಳೆಗಾರರಿಗೆ ಖುಷಿಯಾಗದೇ ಇರಲು ಏನಿದೆ ಕಾರಣ ?