ಲಕ್ಷದ್ವೀಪದ ನಟಿ ಮಾಡೆಲ್ ಆಯಿಷಾ ಸುಲ್ತಾನ್ ದೇಶದ್ರೋಹದ ಆರೋಪದಡಿ ಬಂಧನ | ಆಕೆಯನ್ನು ಬೆಂಬಲಿಸಿ ಬರೆಯುತ್ತಿರುವ ಕನ್ನಡ ಪತ್ರಿಕೆಗಳು !
ನವದೆಹಲಿ: ಟಿವಿ ಮಾಧ್ಯಮದ ಚರ್ಚಾ ಕಾರ್ಯಕ್ರಮದಲ್ಲಿ ಕೊರೊನಾ ವೈರಸ್ ಕುರಿತು ಸುಳ್ಳು ಸುದ್ದಿ ಹರಡಿದ್ದಾರೆ ಎಂಬ ಬಿಜೆಪಿ ನಾಯಕರೊಬ್ಬರ ದೂರಿನ ಆಧಾರದ ಮೇಲೆ ಲಕ್ಷದ್ವೀಪದ ನಟಿ-ಮಾಡೆಲ್ ಆಯಿಷಾ ಸುಲ್ತಾನ ಮೇಲೆ ದೇಶದ್ರೋಹದ ಕೇಸು ದಾಖಲಾಗಿದೆ.
ಈ ಪ್ರಕರಣದಡಿಯಲ್ಲಿ ಲಕ್ಷದ್ವೀಪ ಕವರತ್ತಿ ಪೊಲೀಸರು ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ 124 ಎ (ದೇಶದ್ರೋಹ) ಮತ್ತು 153 ಬಿ (ದ್ವೇಷ ಭಾಷಣ) ಸೆಕ್ಷನ್ ಅಡಿಯಲ್ಲಿ ಆಯಿಷಾ ಸುಲ್ತಾನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಆಯಿಷಾ ಸುಲ್ತಾನ ಅವರು ಲಕ್ಷದ್ವೀಪದ ಚೌತಿಯಾತ್ ದ್ವೀಪದ ನಿವಾಸಿ. ಲಕ್ಷದ್ವೀಪ ಮೂಲದ ಮಾಡೆಲ್ ಮತ್ತು ನಟಿ ಆಗಿರುವ ಆಯಿಷಾ ಸುಲ್ತಾನ ಮಲಯಾಳಂ ಅನೇಕ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ.
ಆಯಿಷಾ ವಿರುದ್ಧ ಲಕ್ಷದ್ವೀಪ ಘಟಕದ ಬಿಜೆಪಿ ಅಧ್ಯಕ್ಷ ಅಬ್ದುಲ್ ಖಾದರ್ ದೂರು ದಾಖಲಿಸಿದ್ದಾರೆ. ಕವರತ್ತಿ ಪೊಲೀಸ್ ಠಾಣೆಯಲ್ಲಿ ಬುಧವಾರ ಸಲ್ಲಿಕೆಯಾಗಿರುವ ದೂರಿನ ಪ್ರಕಾರ ಮಲಯಾಳಂ ಟಿವಿ ಚಾನೆಲ್ನಲ್ಲಿ ಚರ್ಚಾ
ಕಾರ್ಯಕ್ರಮದ ವೇಳೆ, ಲಕ್ಷದ್ವೀಪದಲ್ಲಿ ಕೊರೋನಾ ಹರಡಿಸಲು ಕೇಂದ್ರ ಸರ್ಕಾರ ಜೈವಿಕ ಅಸ್ತ್ರ ಬಳಸಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ ಎಂದು ಉಲ್ಲೇಖವಾಗಿದೆ.
ಲಕ್ಷದ್ವೀಪದಲ್ಲಿ ಕೊರೋನಾ ಶೂನ್ಯ ಪ್ರಕರಣಗಳಿದ್ದವು. ಇಂದು ದಿನವೊಂದಕ್ಕೆ 100 ಪ್ರಕರಣಗಳು ವರದಿಯಾಗುತ್ತಿವೆ. ಇದು ಕೇಂದ್ರ ಸರ್ಕಾರ ಜೈವಿಕ ಅಸ್ತ್ರದ ಪರಿಣಾಮ ಎಂದು ಸ್ಪಷ್ಟವಾಗಿ ಹೇಳುತ್ತೇನೆಂದು ಡಿಬೇಟ್ ಕಾರ್ಯಕ್ರಮದಲ್ಲಿ ಆಯಿಷಾ ಸುಲ್ತಾನ ಆರೋಪಿಸಿದ್ದರು.
ಈ ಹಿನ್ನೆಲೆಯಲ್ಲಿ ದೂರು ದಾಖಲಿಸಿರುವ ಬಿಜೆಪಿ ಅಧ್ಯಕ್ಷ ಆಯಿಷಾ ಅವರ ಹೇಳಿಕೆ ದೇಶದ್ರೋಹದ್ದಾಗಿದೆ. ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ
ದೂರಿನ ಬೆನ್ನಲ್ಲೇ ಫೇಸ್ಬುಕ್ನಲ್ಲಿ ಪ್ರತಿಕ್ರಿಯೆ ನೀಡಿರುವ ಆಯಿಷಾ, ನನ್ನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಆದಾಗ್ಯೂ, ಸತ್ಯ ಮಾತ್ರ ಮೇಲುಗೈ ಸಾಧಿಸುತ್ತದೆ. ದೂರು ದಾಖಲಿಸಿದ ಬಿಜೆಪಿ ನಾಯಕರು ಸಹ ಲಕ್ಷದ್ವೀಪದವರು. ತನ್ನ ನೆಲಕ್ಕೆ ದ್ರೋಹ ಮಾಡುವುದನ್ನು ಅವರು ಮುಂದುವರಿಸುತ್ತಿದ್ದಂತೆ, ನಾನು ಅದಕ್ಕಾಗಿ ಹೋರಾಡುತ್ತೇನೆ. ದ್ರೋಹ ಮಾಡಿದವರು ನಾಳೆ ಪ್ರತ್ಯೇಕವಾಗುತ್ತಾರೆ ಎಂದು ಆಯಿಷಾ ಸುಲ್ತಾನ ಹೇಳಿದ್ದಾರೆ.
ಈ ಮಧ್ಯೆ ಲಕ್ಷದ್ವೀಪದ ಹಲವು ಮಂದಿ ಬಿಜೆಪಿ ಸದಸ್ಯರುಗಳು ಆಕೆಯ ಮೇಲಿನ ಪ್ರಕರಣವನ್ನು ವಿರೋಧಿಸಿ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. ನಮ್ಮ ಏಕಮುಖದ ಅಭಿಪ್ರಾಯ ಬಿತ್ತುವ ಕೆಲವು ಪತ್ರಿಕೆಗಳು ಮಾತ್ರ ಒನ್ ಸೈಡೆಡ್ ವರದಿ ಪ್ರಕಟಿಸುತ್ತಿವೆ. ಆಕೆಯನ್ನು ಬಂಧಿಸಿರುವುದು ದೇಶದ್ರೋಹದ ಕೇಸಿನ ಮೇಲೆ. ಇಂತಹ ಪತ್ರಿಕೆಗಳು ದೇಶದ್ರೋಹದ ಆಕೆಯ ಮಾತಿನ ಬಗ್ಗೆ ಮೌನದಿಂದ ಇವೆ.