ಸ್ನೇಹಿತರ ಜೊತೆ ಪಲ್ಲಂಗದಾಟವಾಡಲು ಪತ್ನಿಯನ್ನು ಒತ್ತಾಯಿಸಿದ, ಜನ್ಮ ನೀಡಿದ ಮಗುವಿಗೆ ನೀಲಿ ಕಣ್ಣೆಂದು ಮನೆಯಿಂದ ಹೊರದಬ್ಬಿದ..ಕಟುಕ ಪತಿಮಹಾಶಯನ ವಿರುದ್ಧ ಠಾಣೆ ಮೆಟ್ಟಿಲೇರಿದ ಮಹಿಳೆ..ರಾಜ್ಯದಲ್ಲೇ ನಡೆದ ಅಚ್ಚರಿಯ ಪ್ರಕರಣ !
ಸ್ನೇಹಿತನೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಪತ್ನಿಗೆ ಒತ್ತಾಯಿಸುತ್ತಾ, ಮಾನಸಿಕ ಹಿಂಸೆ ನೀಡುತ್ತಿದ್ದ ಪತಿ ಮಹಾಶಯನ ವಿರುದ್ಧ ನಗರ ಪೂರ್ವ ವಿಭಾಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ ವೈಫ್ ಸ್ವಾಪರ್. ಹೆಂಡತಿಯರನ್ನು ಒಂದು ದಿನದ ಮಟ್ಟಿಗೆ ಬದಲಿಸಿಕೊಳ್ಳುವುದು ಆತನ ಖಯಾಲಿ. ಹಾಗೆ ತನ್ನ ಧರ್ಮಪತ್ನಿಯನ್ನು ಬೇರೊಬ್ಬನೊಂದಿಗೆ ಹಂಚಿಕೊಳ್ಳಲು ಆತ ಪತ್ನಿಯನ್ನು ಒತ್ತಾಯಿಸುತ್ತಾನೆ. ಸಿಡಿದೆದ್ದ ಹೆಂಡತಿ ಪೊಲೀಸರಿಗೆ ದೂರು ನೀಡುತ್ತಾಳೆ.
ನೊಂದ ಪತ್ನಿ ನೀಡಿದ ದೂರಿನ ಮೇರೆಗೆ ಪತಿ ವಸೀಂ ಷರೀಫ್ ಸೇರಿ ಐವರ ವಿರುದ್ಧ ಎಫ್ಐಆರ್ ದಾಖಲಿಸಿದ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಬನಶಂಕರಿಯ ಯುವತಿಯು 2018ರ ಜನವರಿಯಲ್ಲಿ ಬಿಟಿಎಂ ಲೇಔಟ್ ನಿವಾಸಿ ವಸೀಂ ಶರೀಫ್ ಎಂಬಾತನನ್ನು ವಿವಾಹವಾಗಿದ್ದಳು. ಮದುವೆಯಾದ ಮೊದಲಿಗೆ ಆತನು ತನ್ನ ಪತ್ನಿಯನ್ನು ಊಟಿ, ಗೋವಾಗೆ ಕರೆದೊಯ್ದಿದ್ದ, ಅಲ್ಲಿ ಪತ್ನಿಗೆ ಮದ್ಯ ಸೇವಿಸುವಂತೆ ಒತ್ತಾಯವನ್ನೂ ಮಾಡಿದ್ದ. ಇದಕ್ಕೆ ಒಪ್ಪದಿದ್ದಾಗ ಆಕೆಯ ಮೇಲೆ ಹಲ್ಲೆ ಮಾಡಿ
ವಾಪಸ್ ಬೆಂಗಳೂರಿಗೆ ಕರೆ ತಂದಿದ್ದಾನೆ.
ಅಷ್ಟಕ್ಕೂ ಸುಮ್ಮನಾಗದ ಆತ ಮನೆಯಲ್ಲೇ ಮದ್ಯದ ಪಾರ್ಟಿ ಮಾಡಿ,ತನ್ನ ಗೆಳೆಯರನ್ನು ಮನೆಗೆ ಆಹ್ವಾನಿಸಿದ್ದಾನೆ. ಈ ವೇಳೆ ಪತ್ನಿಯ ಕೈಯಲ್ಲೇ ಮದ್ಯ ಕೊಡಿಸಿ ಸ್ನೇಹಿತರ ಜತೆ ಸೆಕ್ಸ್ ಮಾಡು ಎಂದು ಪೀಡಿಸುತ್ತಿದ್ದ. ಪತ್ನಿಗೆ ಎರಡು ಬಾರಿ ಅಬಾರ್ಷನ್ ಮಾಡಿಸಿರುವ ಆರೋಪಿ ವಸೀಂ, ಮೂರನೇ ಬಾರಿ ಹೆಣ್ಣು ಮಗು ಜನನವಾದಾಗ ಮಗುವಿಗೆ ನೀಲಿ ಕಣ್ಣಿದೆ ಎಂಬ ಆರೋಪವನ್ನು ಮಾಡಿ, ಅದೇ ಕಾರಣಕ್ಕೆ ಪತ್ನಿಯನ್ನು ಮನೆಯಿಂದ ಹೊರಹಾಕಿ ವಿಕೃತಿ ಮೆರೆದಿದ್ದಾನೆ ಎಂದು ದೂರಿನಲ್ಲಿ ಪತ್ನಿ ಉಲ್ಲೇಖಿಸಲಾಗಿದೆ.
ಸದ್ಯ ತನಗಾದ ಅನ್ಯಾಯದ ಬಗ್ಗೆ ನೊಂದ ಮಹಿಳೆ ಪೂರ್ವ ವಲಯ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಮಹಿಳೆ ನೀಡಿರುವ ದೂರಿನ ಅನ್ವಯ ಆರೋಪಿ ಸೈಕೋ ಪತಿಯ ಮಾಹಿತಿ ಕಲೆಹಾಕಿರುವ ಪೊಲೀಸರು, ವಿಚಾರಣೆಗೆ ಹಾಜರಾಗುವುದಕ್ಕೆ ನೋಟಿಸ್ ಕೊಡಲು ಸಿದ್ಧತೆ ನಡೆಸಿದ್ದಾರೆ.