21 ವರ್ಷದೊಳಗಿನ ಯುವತಿಯರಿಗೆ ಮಾತ್ರ | ಮಹಿಳಾ ಅಭ್ಯರ್ಥಿಗಳಿಗೆ ಇಲ್ಲಿದೆ 100 ಪೋಸ್ಟ್ ಖಾಲಿ
ಭಾರತೀಯ ಸೇನಾಪಡೆಗೆ ಸೇರ ಬಯಸುವ ಯುವತಿಯರಿಗೆ ಒಂದು ಸುವರ್ಣಾವಕಾಶ. ಎಸ್ಸೆಸ್ಸೆಲ್ಸಿ ಮುಗಿಸಿರುವ 100 ಮಹಿಳಾ ಅಭ್ಯರ್ಥಿಗಳನ್ನು ಸೋಲ್ಡರ್ ಜನರಲ್ ಡ್ಯೂಟಿ (ವುಮೆನ್ ಮಿಲಿಟರಿ ಪೊಲೀಸ್) ಹುದ್ದೆಗೆ ನೇಮಕ ಮಾಡಿಕೊಳ್ಳಲು ರ್ಯಾಲಿ ನಡೆಸಲಾಗುತ್ತಿದೆ.
ಅಗತ್ಯ ದಾಖಲೆಗಳ ಜತೆ ವಿವಾಹಿತೆ ಹಾಗೂ ಅವಿವಾಹಿತೆ ಪ್ರಮಾಣಪತ್ರಗಳನ್ನು ಸಲ್ಲಿಸಬೇಕು. ಮೊಣಕೈ ಮೇಲಿರುವ ಹಚ್ಚೆ ಬಿಟ್ಟು ದೇಹದ ಯಾವುದೇ ಭಾಗದಲ್ಲಿ ಶಾಶ್ವತ ಹಚ್ಚೆ ಇದ್ದರೆ ಅಂತಹ ಅಭ್ಯರ್ಥಿಗಳನ್ನು ಆಯ್ಕೆಯಿಂದ ಪ್ರಕ್ರಿಯೆಯಿಂದ ಹೊರಗಿಡಲಾಗುವುದು. ಗಭಿರ್ಣಿಯರಿಗೆ ಅವಕಾಶ ಇರಲ್ಲ.
ಒಟ್ಟು ಹುದ್ದೆಗಳು: 100
ರ್ಯಾಲಿ ನಡೆಯುವ ಸ್ಥಳಗಳು:
ಬೆಳಗಾವಿ, ಪುಣೆ, ಅಂಬಾಲ, ಲಖನೌ, ಜಬಲ್‌ಪುರ್, ಶಿಲ್ಲಾಂಗ್
ವಿದ್ಯಾರ್ಹತೆ:
10ನೇ ತರಗತಿ ಪಾಸಾಗಿದ್ದು, ಕನಿಷ್ಠ ಶೇ.45 ಅಂಕ ಪಡೆದಿರಬೇಕು.
ಮಾನ್ಯತೆ ಪಡೆದ ಶಿಕ್ಷಣ ಮಂಡಳಿಗಳ ಪ್ರಮಾಣಪತ್ರವನ್ನಷ್ಟೇ ಪರಿಗಣಿಸಲಾಗುತ್ತದೆ.
ವಯೋಮಿತಿ:
ಕನಿಷ್ಠ 17 ವರ್ಷ ಆರು ತಿಂಗಳು, ಗರಿಷ್ಠ 21 ವರ್ಷ ವಯೋಮಿತಿ ನಿಗದಿಯಾಗಿದೆ.
(2020ರ ಅಕ್ಟೋಬರ್ 1 ರಿಂದ 2004ರ ಏಪ್ರಿಲ್ 1ರ ನಡುವೆ ಜನಿಸಿರಬೇಕು).
ಸಾವನ್ನಪ್ಪಿರುವ ರಕ್ಷಣಾ ಸಿಬ್ಬಂದಿ ಪತ್ನಿಯರಿಗೆ ಗರಿಷ್ಠ 30 ವರ್ಷ ವಯೋಮಿತಿ ನೀಡಿ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.
ದೈಹಿಕ ಅರ್ಹತೆ:
ಎತ್ತರ ಕನಿಷ್ಠ 152 ಸೆಂ. ಮೀಟರ್ ಇರಬೇಕು. ಸೈನ್ಯದ ವೈದ್ಯಕಿಯ ಮಾನದಂಡಗಳ ಪ್ರಕಾರ ವಯಸ್ಸಿಗೆ ಅನುಗುಣವಾಗಿ ದೇಹದ ತೂಕ ನಿರ್ಧರಿಸಲಾಗುವುದು. ದೈಹಿಕವಾಗಿ, ವೈದ್ಯಕಿಯ ಹಾಗೂ ಮಾನಸಿಕವಾಗಿ ಸದೃಢರಾಗಿರುವ ಬಗ್ಗೆ ಪ್ರಮಾಣಪತ್ರ ಸಲ್ಲಿಸಬೇಕು.
ದೈಹಿಕ ಕ್ಷಮತೆ:
1.6 ಕಿ.ಮೀ ಓಟವನ್ನು 7 ನಿಮಿಷ 30 ಸೆಕೆಂಡ್‌ಗಳಲ್ಲಿ ಪೂರೈಸಬೇಕು.
10 ಅಡಿ ಉದ್ದ ಜಿಗಿತ, 3 ಅಡಿ ಎತ್ತರ ಜಿಗಿಯುವ ಸಾಮರ್ಥ್ಯ ಹೊಂದಿರಬೇಕು.
ಕೊನೆಗೆ ವೈದ್ಯಕಿಯ ಪರೀಕ್ಷೆ ನಡೆಸಲಾಗುತ್ತದೆ. ನಂತರ ಲಿಖಿತ ಪರೀಕ್ಷೆ ಕೂಡ ಇರುತ್ತದೆ. ಸೈನಿಕರ ಮಗಳು, ಮಾಜಿ ಸೈನಿಕರ ಮಗಳು, ವಿಧವೆಯರಿಗೆ ಅಂಕಗಳಲ್ಲಿ ರಿಯಾಯಿತಿ ನೀಡಲಾಗುವುದು.
ಅರ್ಜಿಸಲ್ಲಿಸಲು ಕೊನೇ ದಿನ: 20.7.2021
ಈ ಸಂಬಂಧಿ ಅಧಿಸೂಚನೆಗೆ ಲಾಗಿನ್ ಮಾಡಿ:No
http://www.joinindianarmy.nic.in