ದುಬೈ ಸುನ್ನಿ ಸೆಂಟರ್ ಫಾರ್ ಇಸ್ಲಾಮಿಕ್ ಎಜುಕೇಶನ್ ಅಧ್ಯಕ್ಷರಾಗಿ ಅಬ್ದುಲ್ ಸಲಾಂ ಬಾಖವಿ
ದುಬೈ ಸರಕಾರದ ಅಂಗೀಕೃತ ಇಸ್ಲಾಮಿಕ್ ವಿದ್ಯಾ ಸಂಸ್ಥೆ ಸುನ್ನಿ ಸೆಂಟರ್ ಫಾರ್ ಇಸ್ಲಾಮಿಕ್ ಎಜುಕೇಷನ್ ಇದರ ನೂತನ ಅಧ್ಯಕ್ಷರಾಗಿ ಸಮಸ್ತ ಕೇರಳ ಜಮೀಯತುಲ್ ಉಲೆಮಾ ಮುಶಾವರ ಇದರ ಸದಸ್ಯರಾದ ಅಬ್ದುಲ್ ಸಲಾಂ ಬಾಖವಿ ಅವರನ್ನು ಆಯ್ಕೆ ಮಾಡಲಾಗಿದೆ.
ಅಬ್ದುಲ್ ಸಲಾಂ ಬಾಖವಿ ಅವರು ದುಬೈ ಸುನ್ನಿ ಸೆಂಟರ್ ಅಧ್ಯಕ್ಷರಾಗಿದ್ದ ಸಯ್ಯದ್ ಹಾಮಿದ್ ಕೋಯಮ್ಮ ತಂಙಳ್ ಅವರ ನಿಧನದಿಂದ ತೆರವಾದ ಸ್ಥಾನವನ್ನು ಅಲಂಕರಿಸಿದರು.
ಅಬ್ದುಲ್ ಸಲಾಂ ಬಾಖವಿ ಅವರನ್ನು ಎಸ್ಕೆಎಸ್ಸೆಸ್ಸೆಫ್ ಕರ್ನಾಟಕ ಯುಎಇ ರಾಜ್ಯ ಸಮಿತಿ ಅಧ್ಯಕ್ಷರಾದ ಸಯ್ಯದ್ ಅಸ್ಕರ್ ಅಲೀ ತಂಙಲ್ ಅಭಿನಂದಿಸಿದ್ದಾರೆ.