ಸುಳ್ಯ : ದಾಸ್ತಾನು ಕೊಠಡಿಯಲ್ಲಿ ಅಗ್ನಿ ಅವಘಡ | ಲಕ್ಷಾಂತರ ನಷ್ಟ
ಸುಳ್ಯ ತಾಲೂಕಿನ ನೆಲ್ಲೂರು ಕೆಮ್ರಾಜೆ ಗ್ರಾಮದ ಕೆರೆಮೂಲೆ ಎಂಬಲ್ಲಿ ದಾಸ್ತಾನು ಕೊಠಡಿಯೊಂದಕ್ಕೆ ಬೆಂಕಿ ಬಿದ್ದು ಲಕ್ಷಾಂತರ ರೂ ನಷ್ಟವಾದ ಬಗ್ಗೆ ವರದಿಯಾಗಿದೆ.
ನೆಲ್ಲೂರು ಕೆಮ್ರಾಜೆ ಗ್ರಾಮದ ಕೆರೆಮೂಲೆ ಉಮೇಶ ನಾಯಕ್ ಎಂಬವರ ದಾಸ್ತಾನು ಕೊಠಡಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದ ಪರಿಣಾಮ ಅಂದಾಜು ಸುಮಾರು 2.5 ಲಕ್ಷ ರೂ. ನಷ್ಟ ಸಂಭವಿಸಿದೆ.
ಈ ಬೆಂಕಿ ಅವಘಡಕ್ಕೆ ಕಾರಣ ಏನೆಂಬುದು ತಿಳಿ ಬಂದಿಲ್ಲ. ಸ್ಥಳೀಯರು ಸೇರಿ ಬೆಂಕಿಯನ್ನು ನಂದಿಸಿದ್ದಾರೆ.
ದಾಸ್ತಾನು ಕೊಠಡಿಯಲ್ಲಿ ಅಡಿಕೆ ಕರಿಮೆಣಸು ಇದ್ದು ಬಹುತೇಕ ಬೆಂಕಿಗಾಹುತಿಯಾಗಿದೆ.
ಘಟನಾ ಸ್ಥಳಕ್ಕೆ ನೆಲ್ಲೂರು ಕೆಮ್ರಾಜೆ ಗ್ರಾಮ ಕರಣಿಕ ಮಾರುತಿ ಕಾಂಬ್ಲೆ, ಗ್ರಾ.ಪಂ.ನ ಉಪಾಧ್ಯಕ್ಷ ಧನಂಜಯ ಕುಮಾರ್, ಮಾಜಿ ಅಧ್ಯಕ್ಷ ದಿವಾಕರ ನಾಯಕ್ ಎರ್ಮೆಟ್ಟಿ ಭೇಟಿ ನೀಡಿದ್ದಾರೆ.