ಇನ್ನು ಮುಂದೆ ನಿಮ್ಮ ಮನೆಬಾಗಿಲಲ್ಲೇ ಬ್ಯಾಂಕ್ ಸೇವೆ | ಇಲ್ಲಿದೆ ಎಸ್ ಬಿಐ ನ ಹೊಸ ಸೌಲಭ್ಯ

ಕೊರೋನಾ ಹಿನ್ನೆಲೆಯಲ್ಲಿ ಇತ್ತೀಚಿಗೆ ಎಸ್ ಬಿಐ ತನ್ನ ಸೇವಾ ಅವಧಿಯನ್ನು ಜಾಸ್ತಿ ಮಾಡಿ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿತ್ತು.‌ ಈಗ ಮತ್ತೊಂದು ಹೊಸದಾದ ಸೇವೆ ನೀಡಲು ಮುಂದಾಗಿದ್ದು, ಇದು ಕೂಡ ಗ್ರಾಹಕರಿಗೆ ನೆರವಾಗಲಿದೆ. ಇಲ್ಲಿದೆ ಈ ಹೊಚ್ಚಹೊಸ ಸೇವೆಯ ವಿವರ.

ಈ ಹೊಸ ಸೇವೆಯಲ್ಲಿ ಡೋರ್ ಸ್ಟೆಪ್ ಸೌಲಭ್ಯ ದೊರೆಯಲಿದೆ. ಮನೆಯಲ್ಲಿಯೇ ಕುಳಿತು ಎಸ್ ಬಿಐ ನ ಸೇವೆಗಳನ್ನು ಪಡೆಯಬಹುದಾಗಿದೆ. ಆಯ್ದ ಶಾಖೆಗಳ ಖಾತೆದಾರರಿಗೆ ಡಿಎಸ್‌ಬಿ ಸೇವೆಗಳು ಲಭ್ಯವಿರಲಿವೆ. ಲಭ್ಯವಿರುವ ಸೇವೆಗಳ ಪಟ್ಟಿ ಇಂತಿದೆ:

*ಕ್ಯಾಶ್ ಪಿಕಪ್
*ಕ್ಯಾಶ್ ಡೆಲಿವರಿ
*ಚೆಕ್ ಪಿಕಪ್
*ಚೆಕ್ ಮತ್ತು ವಿನಂತಿಯ ಸ್ಲಿಪ್ ಪಿಕಪ್
*ಫಾರಂ 15ಎಚ್ ಪಿಕಪ್
*ಡ್ರಾಫ್‌ಗಳ ಡೆಲಿವರಿ
*ಅವಧಿ ಹೂಡಿಕೆ ಸಲಹೆಗಳ ಡೆಲಿವರಿ ಜೀವ ಪ್ರಮಾಣಪತ್ರದ ಪಿಕಪ್
*ಕೆವೈಸಿ ದಾಖಲೆಗಳ ಪಿಕಪ್

ಮೇಲ್ಕಂಡ ಸೇವೆಗಳು ಡಿಎಸ್‌ಬಿ ಮುಖೇನ 70 ವರ್ಷ ಮೇಲ್ಪಟ್ಟ ನಾಗರಿಕರು ಹಾಗೂ ದೈಹಿಕವಾಗಿ ಅಶಕ್ತರಾದವರು ಪಡೆಯಬಹುದಾಗಿದೆ. ತಮ್ಮ ಹೋಂ ಬ್ರಾಂಚ್‌ನ 5 ಕಿ.ಮೀ ವ್ಯಾಪ್ತಿಯಲ್ಲಿ ವಿಳಾಸವಿರುವ ಗ್ರಾಹಕರೂ ಸಹ ಈ ಸೇವೆಗಳನ್ನು ಪಡೆಯಬಲ್ಲರು.

ಕೆವೈಸಿ ಪೂರ್ಣಗೊಳಿಸಿದ ಗ್ರಾಹಕರಿಗೆ ಈ ಸೇವೆಗಳು ಸಿಗಲಿದ್ದು, ಖಾತೆಯೊಂದಿಗೆ ಲಗತ್ತಿಸಲಾದ ಮೊಬೈಲ್ ಸಂಖ್ಯೆಯ ಮುಖಾಂತರ ಪಡೆಯಬಹುದಾಗಿದೆ. ಕ್ಯಾಶ್ ಹಿಂಪಡೆತ ಹಾಗೂ ಠೇವಣಿ ಇಡುವ ಮಿತಿಯನ್ನು ದಿನಕ್ಕೆ 20,000 ರೂ./ ನಿಗದಿಪಡಿಸಲಾಗಿದೆ. ಪ್ರತಿಯೊಂದು ಭೇಟಿಗೂ, ಆರ್ಥಿಕವಲ್ಲದ ವ್ಯವಹಾರಕ್ಕೆ 60 ರೂ. + ಜಿಎಸ್‌ಟಿ ಹಾಗೂ ವಿತ್ತೀಯ ವ್ಯವಹಾರಕ್ಕೆ 100 ರೂ. + ಜಿಎಸ್‌ಟಿ ಶುಲ್ಕ ವಿಧಿಸಲಾಗುತ್ತದೆ. ಚೆಕ್ ಹಾಗೂ ಪಾಸ್‌ಬುಕ್‌ನೊಂದಿಗೆ ಹಿಂಪಡೆತದ ಫಾರಂ ಮೂಲಕ ನಗದು ಹಿಂಪಡೆತಕ್ಕೆ ಅನುಮತಿ ನೀಡಲಾಗಿದೆ.

ಈ ರೀತಿ ಹೊಸ ಹೊಸ ಸೇವೆಗಳನ್ನು ನೀಡುತ್ತಾ ಎಸ್ ಬಿಐ ಗ್ರಾಹಕರಿಗೆ ಇನ್ನಷ್ಟು ಹತ್ತಿರವಾಗುತ್ತಿದೆ. ಹಾಗೆಯೇ ಹಲವು ಮಂದಿ ಈ ಸೇವೆಯ ಸೌಲಭ್ಯವನ್ನು ಪಡೆಯಬಹುದಾಗಿದೆ.

Leave A Reply

Your email address will not be published.