ಪಟ್ಲ ಪೌಂಡೇಶನ್ ವತಿಯಿಂದ ಕಾರ್ಕಳದಲ್ಲಿ ಕಲಾವಿದರಿಗೆ ಆಹಾರ ಸಾಮಾಗ್ರಿ ವಿತರಣೆ
ಕಾರ್ಕಳ: ಕರ್ನಾಟಕ ಕರಾವಳಿಯ ಯಕ್ಷಗಾನ ಭಕ್ತಿಯ ಕಲೆ ಜೊತೆಗೆ ಬದುಕುವ ಕಲೆಯೂ ಆಗಿದೆ. ಬಣ್ಣದ ಬೆಳಕಿನಲ್ಲಿ ಬಣ್ಣ ಬಣ್ಣದ ವೇಷ ಭೂಷಣದೊಂದಿಗೆ ರಾರಾಜಿಸುತ್ತಿರುವ ಕಲಾವಿದರ ಬದುಕನ್ನು ಬದುಕಿಸಲು ಯಕ್ಷದ್ರುವ ಪಟ್ಲ ಫೌಂಡೇಶನ್ ಕಾರಣವಾಗಿದೆ. ಎಂದು ಕಾರ್ಕಳದ ಶಾಸಕರಾದ ಶ್ರೀ ವಿ ಸುನಿಲ್ ಕುಮಾರ್ ಹೇಳಿದರು.
ಅವರು ಮಂಗಳೂರಿನ ಪಟ್ಲ ಪೌಂಡೇಶನ್ ಟ್ರಸ್ಟ್ ವತಿಯಿಂದ ಕೊರೋನಾ ಹಾವಳಿಯಲ್ಲಿ ಸಂಕಷ್ಟಕ್ಕೀಡಾದ ಕಲಾವಿದರಿಗೆ ಕಾರ್ಕಳ ಘಟಕದ ಮೂಲಕ ಕೊಡಮಾಡಿದ ಆಹಾರ ಕಿಟ್ ವಿತರಿಸಿ ಕೊಟ್ಟ ಪಡಿತರ ಕೊನೆ ತನಕ ವಲ್ಲದಿದ್ದರೂ ತಮ್ಮ ಜೀವನದೊಂದಿಗೆ ನಾವಿದ್ದೇವೆ ತಾವು ಯಾರೂ ದೃತಿಗೆಡಬಾರದು ದೈರ್ಯದಿಂದಿರಬೇಕೆಂದು ಟ್ರಸ್ಟ್ ನ ಸ್ಥಾಪಕಾದ್ಯಕ್ಷರಾದ ಪಟ್ಲ ಸತೀಷ ಶೆಟ್ಟರ ಚಿಂತನೆ ಯಾಗಿದೆ.
ಹಾಗಾಗಿ ಎಲ್ಲ ಕಲಾವಿದರು ಬಂದಿರುವ ಕೊರೋನಾ ಆದಷ್ಟು ಬೇಗನೆ ನಿರ್ಮೂಲನೆಯಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿಕೊಂಡು ಸಂತೋಷದ ಜೀವನ ಸಾಗಿಸಿ ಎಂದು ಮುಖ್ಯ ಅತಿಥಿಗಳಾಗಿ ಹಿತ ನುಡಿದರು. ಜೊತೆಗೆ ಕಲಾವಿದರೆಲ್ಲರಿಗೂ ಕಾರ್ಲ ಬ್ರಾಂಡ್ ನ ಬಿಳಿ ಬೆಂಡೆ ಬೀಜವನ್ನೂ ವಿತರಿಸಿದರು.
ಕಾರ್ಕಳ ಘಟಕದ ಅದ್ಯಕ್ಷರಾದ ಶ್ರೀ ವಿಜಯ ಶೆಟ್ಟಿ ಯವರ ಅದ್ಯಕ್ಷತೆಯಲ್ಲಿ ಅವರ ಮನೆಯಲ್ಲೇ ನಡೆದ ಪಡಿತರ ವಿತರಣಾ ಕಾರ್ಯಕ್ರಮದಲ್ಲಿ ಸದಸ್ಯರಾದ, ಪ್ರಾಚಾರ್ಯರಾದ ಶ್ರೀ ಬೇಬಿ ಕೆ. ಈಶ್ವರಮಂಗಲ, ಮತ್ತು ಕಾರ್ಕಳ ತಾಲೂಕಿನ ಬಂಟರ ಮಹಿಳಾ ಸಂಘದ ಅದ್ಯಕ್ಷೆ ಶ್ರೀಮತಿ ಸವಿತಾ ವಿ ಶೆಟ್ಟಿ, ಬಾ.ಜ ಪದ ಜಿಲ್ಲಾ ಯುವ ಮೋರ್ಚಾ ಅದ್ಯಕ್ಷ ಶ್ರೀ ವಿಖ್ಯಾತ್ ಶೆಟ್ಟಿ ಉಪಸ್ಥಿತರಿದ್ದರು. ಟ್ರಸ್ಟ್ ನ ಸಂಚಾಲಕ ಪ್ರೊ.ಬಿ ಪದ್ಮನಾಭ ಗೌಡ ಶುಭಹಾರೈಸಿದರು. ಕಾರ್ಯದರ್ಶಿ ಕಾಂತಾವರ ಮಹಾವೀರ ಪಾಂಡಿ ಕಾರ್ಯಕ್ರಮ ನಿರೂಪಿಸಿದರು.