Which is the ugliest language of India ಎಂಬ ಪ್ರಶ್ನೆಗೆ “ಕನ್ನಡ” ಎಂದು ಉತ್ತರಿಸುತ್ತಿದ್ದ ವೆಬ್ ಸೈಟ್ ನ‌ ಪುಟವನ್ನು ಸರ್ಚ್ ನಿಂದಲೇ ತೆಗೆದುಹಾಕಿದ ಗೂಗಲ್

ಅಗ್ಲಿ ಲಾಂಗ್ವೇಜ್ ಆಫ್ ಇಂಡಿಯಾ ಎಂದು ಸರ್ಚ್ ಮಾಡಿದಾಗ ಕನ್ನಡ ಎಂಬ ಫಲಿತಾಂಶ ನೀಡುತ್ತಿದ್ದ ವೆಬ್‍ಸೈಟ್ ಪೇಜ್ ಅನ್ನು ರಿಪೋರ್ಟ್ ಮಾಡುವಂತೆ ಮನವಿ ಇಂದು ಇಡೀ ದಿನ ಸಾಮಾಜಿಕ ಜಾಲತಾಣಗಳಲ್ಲಿ  ಹರಿದಾಡುತ್ತಲೇ ಇತ್ತು. ಈ ಪ್ರಯತ್ನಕ್ಕೆ ಈಗ ಉತ್ತಮ ಫಲಿತಾಂಶ ದೊರಕಿದೆ. ಅದೇನೆಂದರೆ ಗೂಗಲ್ ತನ್ನ ಸರ್ಚ್ ನಿಂದಲೇ ತೆಗೆದು ಹಾಕಿದೆ.

 

www.debtconsolidationsquad.com ವೆಬ್‍ಸೈಟ್‍ ನಲ್ಲಿ Which is the ugliest language in india ಎಂಬ ಪ್ರಶ್ನೆಗೆ “ಕನ್ನಡ” ಎಂದು ಉತ್ತರವನ್ನು ನೀಡಿತ್ತು. ಈ ಪುಟದಲ್ಲಿರುವ ಮಾಹಿತಿ ಗೂಗಲ್ ಸರ್ಚ್ ನಲ್ಲಿ ಕಾಣುತ್ತಿತ್ತು.

ಗೂಗಲ್ ಸರ್ಚ್ ನಲ್ಲಿ ಈ ಮಾಹಿತಿ ಕಾಣುತ್ತಿದ್ದಂತೆ ಇದನ್ನು ರಿಪೋರ್ಟ್ ಮಾಡಲು ಜಾಲತಾಣಗಳಲ್ಲಿ ಮನವಿಗಳು ಬರುತ್ತಲೇ ಇತ್ತು. ಇಂದು ಭಾರೀ ಸಂಖ್ಯೆಯಲ್ಲಿ ಕನ್ನಡಿಗರು ಇದನ್ನು ರಿಪೋರ್ಟ್ ಮಾಡಲು ಆರಂಭಿಸಿದರು. ಜನರ ರಿಪೋರ್ಟ್ ಗಮನಿಸಿದ ಗೂಗಲ್ ಸರ್ಚ್ ಈಗ ಆ ಉತ್ತರ ಪ್ರದರ್ಶನವಾಗುತ್ತಿದ್ದ ಪುಟವನ್ನೇ ಸರ್ಚ್ ನಿಂದ ತೆಗೆದುಹಾಕಿದೆ.

ಈ ಪ್ರಮಾದ ಗೂಗಲ್‍ನಿಂದ ಆದದ್ದಲ್ಲ. ಬಳಕೆದಾರರು ಯಾವುದೇ ಮಾಹಿತಿ ಹುಡುಕಿದಾಗ ಅದಕ್ಕೆ ಸಂಬಂಧಿಸಿದ ಹತ್ತಿರದ ಮಾಹಿತಿಯನ್ನು ಗೂಗಲ್ ತನ್ನ ಸರ್ಚ್ ರಿಸಲ್ಟ್ ನಲ್ಲಿ ತೋರಿಸುತ್ತದೆ. ಹೀಗಾಗಿ www.debtconsolidationsquad.com ವೆಬ್‍ಸೈಟ್ ನಲ್ಲಿ Which is the ugliest language in India ಪ್ರಶ್ನೆ ಇದ್ದ ಕಾರಣ ಆ ವೆಬ್‍ಸೈಟ್ ತೋರಿಸಿದೆ. ಗೂಗಲ್ ಯಾವಾಗಲೂ ಸರ್ಚ್ ಮಾಡಿದ ಫಲಿತಾಂಶವನ್ನು ನೀಡುತ್ತದೆ ಹೊರತು ಉದ್ದೇಶಪೂರ್ವಕವಾಗಿ ಈ ರೀತಿಯ ಫಲಿತಾಂಶವನ್ನು ಪ್ರಕಟಿಸುವುದಿಲ್ಲ.

ಬಳಕೆದಾರ ಹುಡುಕಿದಾದ ಫಲಿತಾಂಶವನ್ನು ಗೂಗಲ್ ಸರ್ಚ್ ತೋರಿಸುತ್ತದೆಯೋ ಹೊರತು ಆ ಫಲಿತಾಂಶ ಸರಿ ಇದೆಯೋ ತಪ್ಪಿದೆಯೋ ಎಂಬುದನ್ನು ಪರಿಶೀಲಿಸುವುದಿಲ್ಲ. ಅಷ್ಟೇ ಅಲ್ಲದೇ ಇದು ಅಸಾಧ್ಯ. ಆದರೆ ಬಳಕೆದಾರರಿಗೆ ಆಯ್ಕೆಯನ್ನು ನೀಡಿದ್ದು ಒಂದು ವೇಳೆ ತಪ್ಪು ಮಾಹಿತಿಗಳು ಇದ್ದಲ್ಲಿ ಆ ಪೇಜ್ ಅನ್ನು ರಿಪೋರ್ಟ್ ಮಾಡಬಹುದಾಗಿದೆ. ರಿಪೋರ್ಟ್‍ಗಳ ಸಂಖ್ಯೆ ಜಾಸ್ತಿಯಾದರೆ ಗೂಗಲ್ ಸರ್ಚ್ ನಲ್ಲಿ ಕೆಲಸ ಮಾಡುವವರು ಈ ವಿಚಾರವನ್ನು ಪರಿಶೀಲಿಸಿ ಅಂತಿಮ ನಿರ್ಧಾರ ಕೈಗೊಂಡು ಆ ಪೇಜ್‍ಗಳನ್ನು ಸರ್ಚ್ ನಿಂದ ತೆಗೆದು ಹಾಕುತ್ತಾರೆ. ಗೂಗಲ್ ಸರ್ಚ್ ಕೊನೆಯಲ್ಲಿ ‘Send Feedback” ಆಯ್ಕೆಯನ್ನು ಕ್ಲಿಕ್ ಮಾಡಿ ರಿಪೋರ್ಟ್ ಮಾಡಬಹುದಾಗಿದೆ.

ಕನ್ನಡಿಗರೆಲ್ಲರೂ ಒಟ್ಟಾಗಿ ಈ ಪೇಜನ್ನು ರಿಪೋರ್ಟ್ ಮಾಡಿದ ಕಾರಣ ಗೂಗಲ್ ತನ್ನ ಸರ್ಚ್ ಲಿಸ್ಟ್ ನಿಂದಲೇ ಆ ಪುಟವನ್ನು ತೆಗೆದುಹಾಕಿದೆ. ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆಯಾದರೆ ಖಂಡಿತ ಸುಮ್ಮನೆ ಕೂರುವುದಿಲ್ಲ ಎಂಬುದನ್ನು ಈ ಘಟನೆ ತೋರಿಸಿಕೊಟ್ಟಿದೆ.ನಮ್ಮ ಭಾಷೆಗೆ ಏನಾದರೂ ತೊಂದರೆ ಆದರೆ, ಎಲ್ಲರೂ ಒಗ್ಗಟ್ಟಾಗಿ ನಿಂತು ಅದನ್ನು ಗೆಲ್ಲಬಹುದು ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆಯಾಗಿದೆ.

Leave A Reply

Your email address will not be published.