ಪಾಸಿಟಿವಿಟಿ ರೇಟ್ ಕಡಿಮೆಯಾಗದಿದ್ದರೆ ಜಿಲ್ಲೆಯಲ್ಲಿ ಮತ್ತೊಮ್ಮೆ ಲಾಕ್ ಡೌನ್– ಜಿಲ್ಲಾಧಿಕಾರಿ

ಉಡುಪಿ ಜಿಲ್ಲೆಯಲ್ಲಿ ಕೋರೊನಾ ಸೋಂಕು ಕಡಿಮೆಯಾದರೂ ನಿರೀಕ್ಷಿತ ಮಟ್ಟದಲ್ಲಿ ಕಡಿಮೆಯಾಗಿಲ್ಲ. 38% ದಿಂದ 19% ಇಳಿದಿದೆ. ಇದೀಗ ಜೂನ್ 7 ರವರೆಗೆ 10% ಕ್ಕಿಂತ ಕಡಿಮೆ ಸಂಖ್ಯೆಗೆ ಇಳಿಯಬೇಕೆಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದ್ದಾರೆ.

 

ಪಾಸಿಟಿವಿಟಿಯ ಸಂಖ್ಯೆ ಕಡಿಮೆಯಾಗದಿದ್ದರೆ ಮತ್ತೆ ಜಿಲ್ಲೆಯಲ್ಲಿ ಲಾಕ್’ಡೌನ್ ಮುಂದುವರಿಸಬೇಕಾಗುತ್ತದೆಂದು ಹೇಳಿದ್ದಾರೆ. ಇನ್ನೂ ಕೂಡ ಕೆಲವು ಜನ ಸುಮ್ಮನೆ ತಿರುಗಾಡುತ್ತಿದ್ಧಾರೆ.

ಗ್ರಾಮಪಂಚಾಯತ್ ಒಂದರಲ್ಲಿ ಈಗಾಗಲೇ 50+ ಪಾಸಿಟಿವ್ ಇರುವ ಗ್ರಾಮಗಳನ್ನು ಸಿಲ್’ಡೌನ್ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಅದರೊಂದಿಗೆ ಜನರ ಸಹಕಾರ ಮುಖ್ಯ ಇಲ್ಲದಿದ್ದರೆ ಮತ್ತಷ್ಟು ದಿನ ಲಾಕ್’ಡೌನ್ ವಿಸ್ತರಣೆ ಮಾಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

Leave A Reply

Your email address will not be published.