ಸುಳ್ಯ ಕಂದಾಯ ತಾಲೂಕು ವ್ಯಾಪ್ತಿಯ ಗ್ರಾಮಗಳಿಗೆ ಸಂಬಂಧಿಸಿದಂತೆ ಅಕ್ರಮ ಸಕ್ರಮ ಸಮಿತಿಯ ಬೈಠಕ್

ಸುಳ್ಯ ಕಂದಾಯ ತಾಲೂಕು ವ್ಯಾಪ್ತಿಯ ಗ್ರಾಮಗಳಿಗೆ ಸಂಬಂಧಿಸಿದಂತೆ ಅಕ್ರಮ ಸಕ್ರಮ ಸಮಿತಿ ಬೈಠಕ್ ಇಂದು( ಜೂನ್ 3) ತಾಲೂಕು ಕಚೇರಿ ಸಭಾಂಗಣದಲ್ಲಿ ಸಮಿತಿ ಅಧ್ಯಕ್ಷರು, ಮಾನ್ಯ ಸಚಿವರಾದ ಶ್ರೀ ಎಸ್ ಅಂಗಾರ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

56 ನೂತನ ಕಡತಗಳನ್ನು ಮತ್ತು 6 ತಿದ್ದುಪಡಿಯ ಕಡತಗಳನ್ನು ವಿಲೇವಾರಿ ಮಾಡಲಾಯ್ತು . ಸಮಿತಿಯ ಸದಸ್ಯರುಗಳಾದ ರಾಕೇಶ್ ರೈ ಕೆಡೆಂಜಿ, ಬಾಳಪ್ಪ ಕಳಂಜ, ಶ್ರೀಮತಿ ಗುಣವತಿ ಕೊಲ್ಲಂತಡ್ಕ , ತಹಶೀಲ್ದಾರ್ ಅನಿತಾ ಲಕ್ಷ್ಮಿ, ಉಪ ತಹಶೀಲ್ದಾರ್, ಕಂದಾಯ ನಿರೀಕ್ಷಕರುಗಳು, ಉಪಸ್ಥಿತರಿದ್ದರು.
ಇದುವರೆಗೆ ಈ ಅವಧಿಯಲ್ಲಿ ಸುಳ್ಯ ತಾಲೂಕಿನಲ್ಲಿ 3 ಬೈಠಕ್ ಗಳು ನಡೆದಿದ್ದು ಹಕ್ಕುಪತ್ರಗಳನ್ನು ನೀಡುವ ಪ್ರಕ್ರಿಯೆಗಳು ಪ್ರಗತಿಯಲ್ಲಿದೆ ಹಾಗೂ ಸುಳ್ಯ ತಾಲೂಕಿನ ಮುಂದಿನ ಬೈಠಕ್ ಜೂನ್ 25 ಕ್ಕೆ ಮತ್ತು ಕಡಬ ತಾಲೂಕಿನ ಬೈಠಕ್ ಜೂನ್ 18 ಕ್ಕೆ ನಡೆಯಲಿದೆ ಎಂದು ಮಾನ್ಯ ಸಚಿವರು ತಿಳಿಸಿದ್ದಾರೆ

Leave A Reply

Your email address will not be published.