ಕೆಎಸ್‌ಆರ್‌ಟಿಸಿ’ ಹೆಸರು ಕೇರಳ ಪಾಲು | 7 ವರ್ಷಗಳ ಕಾನೂನು ಹೋರಾಟದಲ್ಲಿ ಕರ್ನಾಟಕಕ್ಕೆ ಹಿನ್ನಡೆ

ಕೆಎಸ್‌ಆರ್‌ಟಿಸಿ’ ಪದ ಬಳಕೆಗೆ ಸಂಬಂಧಿಸಿದಂತೆ ಕಳೆದ 7 ವರ್ಷಗಳಿಂದ ನಡೆದ ಕಾನೂನು ಹೋರಾಟದಲ್ಲಿ ಕರ್ನಾಟಕಕ್ಕೆ ಸೋಲಾಗಿದೆ.

“ಕೆಎಸ್‌ಆರ್‌ಟಿಸಿ’ ಹೆಸರು ಮತ್ತು ಲಾಂಛನ ಕೇರಳದ ಸ್ವತ್ತು ಎಂದು ಟ್ರೇಡ್‌ ಮಾರ್ಕ್‌ ರಿಜಿಸ್ಟ್ರಿ ಕೇರಳ ಪರವಾದ ತೀರ್ಪು ನೀಡಿದೆ.

ಬೌದ್ಧಿಕ ಆಸ್ತಿ ಹಕ್ಕು ಕಾಯ್ದೆ ಆಧಾರದಲ್ಲಿ ಇದನ್ನು ಕೇರಳಕ್ಕೆ ಬಿಟ್ಟುಕೊಡಬೇಕೆಂದು ರಿಜಿಸ್ಟ್ರಿ ತೀರ್ಪು ನೀಡಿದೆ.

ಈ ಕುರಿತು 2013ರಿಂದಲೇ ಕಾನೂನು ಹೋರಾಟ ಆರಂಭವಾಗಿತ್ತು.

ಈ ಕುರಿತು ಪ್ರತಿಕ್ರಿಯೆ ನೀಡಿದ ಕೆಎಸ್‌ಆರ್‌ಟಿಸಿಯ ಮಾನೆಜಿಂಗ್ ಡೈರೆಕ್ಟರ್ ಶಿವಯೋಗಿ ಕಳಸದ ಅವರು, ಈ ವಿಚಾರ ಗಮನಕ್ಕೆ ಬಂದಿದ್ದು, ಅಧಿಕೃತ ನೋಟಿಸ್‌, ತೀರ್ಪಿನ ಪ್ರತಿ ಸಿಕ್ಕಿಲ್ಲ. ಅದು ದೊರೆತ ಬಳಿಕ ಕಾನೂನು ತಜ್ಞರ ಸಲಹೆ ಪಡೆದು ಮುಂದುವರಿಯುತ್ತೇವೆ ಎಂದಿದ್ದಾರೆ.

Leave A Reply

Your email address will not be published.