ಮನಸ್ಸು ಕೆಟ್ಟು ಮಗು ಕಳ್ಳತನಕ್ಕೆ ಇಳಿದಿದ್ದ ಮನೋವೈದ್ಯೆ ವರ್ಷಗಳ ಬಳಿಕ ಅಂದರ್ !

ಬೆಂಗಳೂರಿನ ಚಾಮರಾಜಪೇಟೆ ಬಿಬಿಎಂಪಿ ಹೆರಿಗೆ ಆಸ್ಪತ್ರೆಯಿಂದ ಮಗು ಕಳ್ಳತನ ಮಾಡಿಕೊಂಡು ಗ್ರೇಟ್ ಎಸ್ಕೇಪ್ ಆಗಿದ್ದ ಮನೋವೈದ್ಯೆ ಬರೋಬ್ಬರಿ ಒಂದು ವರ್ಷದ ಬಳಿಕ ಪೊಲೀಸರ ಬಲೆಗೆ ಬಿದ್ದಿದ್ದಾಳೆ.

ಕಾಕತಾಳೀಯ ಏನೆಂದರೆ ಕರೆಕ್ಟಾಗಿ ಕಳೆದ ವರ್ಷ ಮೇ 29, 2020ರಲ್ಲಿ ಮಗು ಕಳ್ಳತನ ಮಾಡಿಕೊಂಡು ಮಾಯ ಆಗಿದ್ದ ವೈದ್ಯೆ, ಅದೇ ದಿನ ಅಂದರೆ 2021 ಮೇ 29 ರಂದು ಪೊಲೀಸರ ಬಲೆಗೆ ಬಿದ್ದಿರೋದು ವಿಶೇಷ.

ಆರೋಪಿ ಮನೋವೈದ್ಯೆ ರೇಷ್ಮಾ ಒಂದು ದಂಪತಿಗೆ ಮಗು ಮಾಡಿಕೊಡೊದಾಗಿ 15 ಲಕ್ಷ ರೂಪಾಯಿ ಹಣ ಪಡೆದಿದ್ದಳು. ಆ ದಂಪತಿಯ ಮೊದಲ ಮಗು ಬುದ್ದಿ ಮಾಂದ್ಯತೆಯಿಂದ ಕೂಡಿತ್ತು. ಆ ಮಗುವಿಗೆ ಇದೀಗ ಆರೋಪಿಯಾಗಿರುವ ಡಾಕ್ಟರ್ ರೇಷ್ಮಾ ಚಿಕಿತ್ಸೆ ನೀಡುತ್ತಿರುತ್ತಾರೆ. ಬಾಗಲಕೋಟೆ ಮೂಲದ ಆ ದಂಪತಿಯ ಮೇಲೆ ಡಾಕ್ಟರ್ ಗೆ ಸಹಜವಾಗಿ ಕರುಣೆ ಮೂಡಿತ್ತು. ಆಗ ಅವರಿಗೆ ನಿಮ್ಮದೇ ಮಗು ಮಾಡಿಕೊಡೊದಾಗಿ ಆಕೆ ಆ ದಂಪತಿಗೆ ಭರವಸೆ ಮೂಡಿಸಿದ್ದಾರೆ. ಆ ದಂಪತಿ ಆರ್ಥಿಕವಾಗಿ ಅನುಕೂಲದಲ್ಲಿದ್ದು ಅದರ ಲಾಭ ಪಡೆಯುವ ಉದ್ದೇಶವೂ ಡಾಕ್ಟರ್ ರೇಷ್ಮಾಗೆ ಇತ್ತು. ಅಂತೆಯೇ ಪತಿ, ಪತ್ನಿಯ ವೀರ್ಯಾಣು ಮತ್ತು ಅಂಡಾಣು ತೆಗೆದುಕೊಂಡಿದ್ದಳು. ಈ
ಅಂಡಾಣು ಮತ್ತು ವೀರ್ಯಾಣು ಬೇರೆ ಮಹಿಳೆಗೆ ಇಂಜೆಕ್ಟ್ ಮಾಡಿ ಮಗು ತಯಾರು ಮಾಡಿಕೊಡುವೆ. ಎಂದು ಆ ದಂಪತಿಗೆ ಆಕೆ ನಂಬಿಸಿದ್ದಳು. ಪ್ರಣಾಳಶಿಶು ಮಾಡಿಕೊಳ್ಳುವ ಉದ್ದೇಶ ಆಕೆಯದು. ಅಥವಾ ಸರೋಗೆಟ್ ಮದರ್ ಹುಡುಕಿ ಆ ಮೂಲಕ ದಂಪತಿಗೆ ಮಗುವನ್ನು ಕೊಡಿಸುವುದು ಆಕೆಯ ಉದ್ದೇಶವಾಗಿತ್ತು. ಆದರೆ ಡಾಕ್ಟರ್ ರೇಷ್ಮಾ ರಾಣಿಗೆ ತಕ್ಷಣಕ್ಕೆ ಯಾವುದೇ ಅಡ್ಜಸ್ತ್ಮೆಂಟ್ ಮಾಡಲು ಆಗಿಲ್ಲ.

ಇತ್ತ ದಂಪತಿಗಳು ಡಾಕ್ಟರ್ ರೇಷ್ಮಾಳ ಹಿಂದೆ ಬಿದ್ದಿದ್ದರು. ಹಲಗಲಿ ದುಡ್ಡುಕೊಟ್ಟು ವರ್ಷಗಳೇ ಕಳೆದಿದ್ದವು. ಮಗು ಬೆಳೆಯುತ್ತಿದೆ ಎಂದು ಹೇಳುತ್ತಲೇ ಬರ್ತಿದ್ದ ವೈದ್ಯೆ ಒಂದಷ್ಟು ಕಾಲ ತಳ್ಳಿದಳು. ಆದ್ರೆ ಬರಬರುತ್ತಾ ದಂಪತಿಯ ಒತ್ತಡ ಹೆಚ್ಚಾದಾಗ ಹೇಗಾದರೂ ಮಾಡಿ ಮಗುವನ್ನು ಕೊಡಲೇಬೇಕಾದ ಅನಿವಾರ್ಯತೆ ಡಾಕ್ಟರ್ ರೇಷ್ಮಾ ಗೆ ಬರುತ್ತದೆ. ಆಕೆಗೆ ತಕ್ಷಣಕ್ಕೆ ಬೇರೆ ಯಾವುದೇ ಮಾರ್ಗ ಜೊತೆ ಇದ್ದಾಗ ಆಕೆ ಮಗು ಕಳ್ಳತನಕ್ಕೆ ಇಳಿಯುತ್ತಾಳೆ.

ಹಾಗೆ ಮಗು ಕಳ್ಳತನಕ್ಕೆ ನಿರ್ಧರಿಸಿದ ಡಾಕ್ಟರು ರೇಷ್ಮಾ , ಬಿಬಿಎಂಪಿಯ ಆಸ್ಪತ್ರೆಯೊಂದರಿಂದ, ಬೆಂಗಳೂರಿನ ಜೆಜೆಆರ್ ನಗರ ವಾಸಿಗಳಾದ ನವೀದ್ ಪಾಶಾ ಮತ್ತು ಹುಸ್ನ ಬೇಗಮ್ ಎಂಬ ದಂಪತಿಗ ಮಗು ಎಗರಿಸುತ್ತಾಳೆ. ನಂತರ ಆ ಮಗುವನ್ನು ತೆಗೆದುಕೊಂಡು ಹೋಗಿ ದಂಪತಿ ಮಡಿಲಿಗೆ ಸೇರಿಸಿದ್ದಳು ಎನ್ನಲಾಗಿದೆ. ಕಳ್ಳತನ ಮಾಡಿಕೊಂಡು ಮಗು ದಂಪತಿಗೆ ಕೊಟ್ಟ ಬಳಿಕ ಈ ವಿಚಾರ ಬೆಳಕಿಗೆ ಬಂದಿತ್ತು. ಆದರೆ ಅಷ್ಟರಲ್ಲಿ ಡಾಕ್ಟರ್ ರೇಷ್ಮಾ ಕಣ್ಮರೆಯಾಗಿದ್ದಳು. ಆದ್ರೆ ಆಕೆ ಬೇರೊಂದು ಜಾಗದಲ್ಲಿ ತಲೆಮರೆಸಿಕೊಂಡು ಇನ್ನೊಂದು ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾಗ ಇದೀಗ ಬಂಧಿಸಲಾಗಿದೆ.

ಆ ದಿನ ಘಟನೆ ಬಳಿಕ ಆರೋಪಿಯನ್ನು ಎಲ್ಲಿ ಹುಡುಕಿದರೂ ಮಾಹಿತಿ ಸಿಗುತ್ತಿರಲಿಲ್ಲ. ಆಕೆಯ ಮೊಬೈಲ್ ಜಾಡು ಕೂಡಾ ಡೆಡ್ ಆಗಿತ್ತು. ಇಷ್ಟು ದೀರ್ಘ ಕಾಲ ಆಕೆ ಹೈಡ್ ಆಂಡ್ ಸೀಕ್ ಆಡುವಲ್ಲಿ ಶಕ್ಯಲಾಗಿದ್ದಳು. ಹುಡುಕಿ ಹುಡುಕಿ ಕೈ ಚೆಲ್ಲಿದ
ಪೊಲೀಸರು ಆರು ತಿಂಗಳ ಬಳಿಕ ಆರೋಪಿಯ ರೇಖಾ ಚಿತ್ರವನ್ನ ಬಿಡುಗಡೆ ಮಾಡಿ ಹುಡುಕಿದರೂ ಆಕೆಯದು ನಿಗೂಢ ಕಣ್ಮರೆ.

ಆದರೆ ಕಳೆದ ವಾರಗಳಿಂದ ಆರೋಪಿಯ ಹಳೆಯ ಫೋನ್ ಟವರ್ ಲೊಕೇಷನ್ ನ ಪರಿಧಿಯೊಳಕ್ಕೆ ಬಂದಿತ್ತು. ಅಷ್ಟರೊಳಗೆ ಪೊಲೀಸರು 800 ಮಂದಿಯನ್ನು ವಿಚಾರಣೆಗೆ ಒಳಪಡಿಸಿದ್ದರು. ಮೂವತ್ತೈದು ಸಾವಿರಕ್ಕೂ ಹೆಚ್ಚು ಮೊಬೈಲ್ ಸಂಖ್ಯೆಗಳನ್ನು ಪರಿಶೀಲಿಸಿದ್ದರು. ಕೊನೆಗೆ ಆಕೆ ಮಗು ಕಳ್ಳತನಕ್ಕೆ ಇಳಿಯುವ ಒಂದು ದಿನ ಮೊದಲು ಗೂಗಲ್ ಸರ್ಚ್ ಮಾಡಿ ಹೆರಿಗೆ ಆಸ್ಪತ್ರೆಗಳನ್ನು ಹುಡುಕಿದ ವಿವರಗಳು ಪೊಲೀಸರಿಗೆ ಸಿಕ್ಕಿತ್ತು. ಸುದ್ದಿ ತಿಳಿದ ಪೊಲೀಸರಿಗೆ ಖಚಿತ ಮಾಹಿತಿ ಸಿಕ್ಕಿದೆ. ಟವರ್ ಲೊಕೇಷನ್ ಆಧಾರದ ಮೇಲೆ ಆರೋಪಿ ರೇಷ್ಮಾಳನ್ನ ತಲಘಟ್ಟಪುರ ಪಿಎಸ್ ಐ ಶ್ರೀನಿವಾಸ್ ಅಂಡ್ ಟೀಂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸದ್ಯ ಕಳ್ಳತನ ಮಾಡಿಕೊಂಡು ಹೋಗಿದ್ದ ಮಗುವನ್ನ ಮಗುವಿನ ಜೈವಿಕ ತಂದೆ ತಾಯಿಗೆ ಒಪ್ಪಿಸಲಾಗಿದೆ. ಸದ್ಯ ಪೊಲೀಸರ ವಶದಲ್ಲಿರೋ ಆರೋಪಿಗೆ ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ಆರೋಪಿಯ ಸಂಪೂರ್ಣ ತನಿಖೆಯ ಬಳಿಕ ಮತ್ತಷ್ಟು ಮಾಹಿತಿ ಬಹಿರಂಗ ಆಗುವ ಸಾಧ್ಯತೆಗಳಿವೆ.

Leave A Reply

Your email address will not be published.