ಉಡುಪಿ | ಜೂನ್ 2 ರಿಂದ 50 ಕ್ಕಿಂತ ಹೆಚ್ಚು ಸೋಂಕಿತರಿರುವ ಗ್ರಾಮಗಳು ಸಂಪೂರ್ಣ ಲಾಕ್

ಆಯಾ ಜಿಲ್ಲಾಧಿಕಾರಿಗಳಿಗೆ ತಮ್ಮ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಿಸಲು ಸಂಪೂರ್ಣ ಕ್ರಮ ಕೈಗೊಳ್ಳುವುದಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಸೂಚಿಸಿರುವ ಹಿನ್ನಲೆಯಲ್ಲಿ, ಉಡುಪಿ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು 50 ಕ್ಕಿಂತ ಹೆಚ್ಚು ಪಾಸಿಟಿವ್ ಪ್ರಕರಣಗಳಿರುವ ಗ್ರಾಮಗಳನ್ನು ಸಂಪೂರ್ಣ ಲಾಕ್‌ಡೌನ್ ಮಾಡಲು ನಿರ್ಧರಿದ್ದಾರೆ.

 

ಉಡುಪಿ ಜಿಲ್ಲೆಯಲ್ಲಿ ಪ್ರಸ್ತುತ 35 ಗ್ರಾ.ಪಂ.ಗಳಲ್ಲಿ 50 ಕ್ಕೂ ಅಧಿಕ ಕೊರೊನಾ ಪ್ರಕರಣಗಳಿದ್ದು, ಜೂನ್ 2ರ ಬುಧವಾರದಿಂದ ಈ ಎಲ್ಲಾ ಗ್ರಾಮಗಳು ಸಂಪೂರ್ಣ ಲಾಕ್‌ಡೌನ್ ಆಗಲಿದೆ ಎಂದು ತಿಳಿದು ಬಂದಿದೆ.

ಬುಧವಾರದಿಂದ ನಾಡ, ಹೊಂಬಾಡಿ, ಮಂಡಾಡಿ, ಶಿರೂರು, ಜಡ್ಕಲ್, ಆಜಿ, ಕಂಬದಕೋಣೆ, ಕಾವಾಡಿ, ಮಾಳ, ಕೋಟೇಶ್ವರ, ಪಳ್ಳಿ, ಹಾಲಾಡಿ, ಇಡೂರು ಕುಂಜ್ಞಾಡಿ, ಆಲೂರು,80 ಬಡಗಬೆಟ್ಟು, ಅಲೆವೂರು, ಕಡಲ, ತೆಂಕನಿಡಿಯೂರು, ಬೊಮ್ಮರಬೆಟ್ಟು, ನಿಟ್ಟೆ, ಪೆರ್ಡೂರು, ಬೆಳಪು, ಬೆಳ್ಳಿ, ಪಡುಬಿದ್ರಿ, ಶಿರ್ವ, ಈದು, ಕುಕ್ಕುಂದೂರು, ಮರ್ಣೆ, ಮಿಯಾರು, ಬೆಳ್ವೆ, 38 ಕಳತ್ತೂರುಮುದ್ರಾಡಿ, ವರಂಗ, ಬೆಳ್ಳಣ್, ಇಷ್ಟು ಗ್ರಾಮಗಳು ಸಂಪೂರ್ಣ ಲಾಕ್‌ಡೌನ್ ಆಗಲಿದೆ.

ಇಷ್ಟು ಬಿಗಿಯಾದ ಲಾಕ್ ಡೌನ್ ಮಾಡುವುದರಿಂದ ಸೋಂಕಿತರ ಸಂಖ್ಯೆ ಆದಷ್ಟು ಕಡಿಮೆಯಾಗುವ ಸಾಧ್ಯತೆಯಿದೆ. ಇದು ಜಿಲ್ಲಾಧಿಕಾರಿಯ ಉತ್ತಮ ನಿರ್ಧಾರ ಎಂದು ಉಡುಪಿ ಜನತೆ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

Leave A Reply

Your email address will not be published.