ನಿಯಮ ಮೀರಿ ಮದ್ಯ ಮಾರಾಟ | ಬಾರ್ ಗೆ ಪೊಲೀಸ್ ದಾಳಿ ,ಮಾಲಕಿ ಸಹಿತ ನಾಲ್ವರ ಬಂಧನ

ಲಾಕ್‍ಡೌನ್‍ ನಿಯಮಗಳನ್ನು ಮೀರಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಬಾರ್ ಅಂಡ್ ರೆಸ್ಟೋರೆಂಟ್‌ನ ಮೇಲೆ ದಾಳಿ ನಡೆಸಿರುವ ಬೆಂಗಳೂರಿನ ಈಶಾನ್ಯ ವಿಭಾಗದ ಪೊಲೀಸರು ಬಾರ್ ಮಾಲಕಿ ಸೇರಿ ನಾಲ್ವರನ್ನು ಬಂಧಿಸಿದ್ದಾರೆ.

 

ಬೆಂಗಳೂರಿನ ಅಮೃತಹಳ್ಳಿಯ ಅಮೃತ ನಗರದ ರೆಸ್ಟೋರೆಂಟ್‍‌ವೊಂದರ ಮಾಲಕಿ ಭಾಗ್ಯಲಕ್ಷ್ಮಿ, ಕೆಲಸಕ್ಕಿದ್ದ ಶಿವಲಿಂಗ(31), ಮನು(25), ಭಾಸ್ಕರ(28) ಬಂಧಿತ ಆರೋಪಿಗಳು.

ಈ ಕುರಿತು ಖಚಿತ ಮಾಹಿತಿ ನಡೆದ ಡಿಸಿಪಿ ಸಿ.ಕೆ.ಬಾಬಾ ಅವರ ನೇತೃತ್ವದಲ್ಲಿಸಂಪಿಗೆಹಳ್ಳಿ ಎಸಿಪಿ ನಾಗರಾಜು, ಅಮೃತಹಳ್ಳಿ ಪೊಲೀಸ್ ಇನ್‍ಸ್ಪೆಕ್ಟರ್ ಸುರೇಶ್ ಮತ್ತವರ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳು ಲಾಕ್‍ಡೌನ್ ನಿಯಮ ಮೀರಿ ಸಂಜೆ 6 ರವರೆಗೆ ಮದ್ಯ ಮಾರಾಟ ಮಾಡುತ್ತಿರುವುದು ತನಿಖೆಯಲ್ಲಿ ಪತ್ತೆಯಾಗಿದ್ದು, ಇವರಿಂದ 23 ಸಾವಿರ ರೂ. ನಗದು, 10 ಸಾವಿರ ಮೌಲ್ಯದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.

Leave A Reply

Your email address will not be published.