ಮೈದಾನದಲ್ಲಿ ಆಡುತ್ತಿದ್ದಾಗ ಪೊಲೀಸರ ದಾಳಿ | ಬೈಕ್ ಗಳ ವಶ

ಮಂಗಳೂರು : ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯ ತಲಪಾಡಿ ಗ್ರಾಮದ ಪಂಜಳ ಎಂಬಲ್ಲಿ ಆಟ ಆಡುತ್ತಿದ್ದ ಮೈದಾನಕ್ಕೆ ಉಳ್ಳಾಲ ಪೊಲೀಸರು ದಾಳಿ ನಡೆಸಿದ್ದಾರೆ.

 

ಕೋವಿಡ್ ಕರ್ಫ್ಯೂ ಉಲ್ಲಂಘಿಸಿ ಏಳು ಮಂದಿ ಹೌಝಿ ಹೌಝಿ ಪಂದ್ಯದಲ್ಲಿ ನಿರತರಾಗಿದ್ದರು ಎನ್ನಲಾಗಿದೆ.

ಈ ಮಾಹಿತಿ ಪಡೆದ ಉಳ್ಳಾಲ ಪೊಲೀಸರು ಸೋಮವಾರ ಸಂಜೆ ದಾಳಿ ನಡೆಸಿದ್ದಾರೆ.

ಪಂದ್ಯದಲ್ಲಿ ನಿರತರಾಗಿದ್ದ ಯುವಕರು ಪರಾರಿಯಾಗಿದ್ದು, ಅವರು ಬಳಕೆ ಮಾಡಿದ ಮೂರು ಬೈಕ್ ಗಳನ್ನು ಉಳ್ಳಾಲ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಕುರಿತು ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave A Reply

Your email address will not be published.