ಕೋವಿಡ್ನಿಂದ ಮೃತಪಟ್ಟವರಿಗೆ 4 ಲಕ್ಷ ಪರಿಹಾರಧನ ಎಂಬುದು ಸುಳ್ಳು ಸಂದೇಶ – ಡಾ.ರಾಜೇಂದ್ರ ಕೆ.ವಿ
ಕೋವಿಡ್ನಿಂದ ಮೃತಪಟ್ಟವರ ಕುಟುಂಬಕ್ಕೆ ಕೇಂದ್ರ ಸರಕಾರ ವತಿಯಿಂದ 4 ಲಕ್ಷ ರೂಪಾಯಿ ಸಹಾಯ ಧನ ಪ್ರಕಟಿಸಿದೆ.ಇದಕ್ಕಾಗಿ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿರುವ ಪಿಡಿಎಫ್ ನಮೂನೆಯಲ್ಲಿ ಅರ್ಜಿ ನೀಡುವಂತೆ ವಿವರವುಳ್ಳ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಈ ಸಂದೇಶ ಸುಳ್ಳು ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಸ್ಪಷ್ಟಪಡಿಸಿದ್ದಾರೆ.
‘ಕೋವಿಡ್ 19ನಿಂದ ಮೃತಪಟ್ಟ ಕುಟುಂಬದವರಿಗೆ ಕೇಂದ್ರ ಸರ್ಕಾರ 4 ಲಕ್ಷ ರೂಪಾಯಿ ಸಹಾಯ ಧನ ಪ್ರಕಟಿಸಿದೆ. ಇದನ್ನು ಪಡೆಯಲು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿನಲ್ಲಿನ ನಮೂನೆ ಈ PDF ಫೈಲ್ ನಲ್ಲಿದೆ.
ಈ ವಿಷಯ ಎಲ್ಲಾರಿಗೂ ತಲುಪಿಸಿ.’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ರವಾನೆಯಾಗುತ್ತಿದೆ. ಜತೆಗೆ, ಪಿಡಿಎಫ್ ಫೈಲ್ ರವಾನಿಸಲಾಗುತ್ತಿದೆ.
ಈ ಕುರಿತು ಜಿಲ್ಲಾಧಿಕಾರಿಯವರು ಮೇಲಿನಂತೆ ಸ್ಪಷ್ಟ ಪಡಿಸಿದ್ದಾರೆ.