SBI ಬ್ಯಾಂಕಿನ ಗ್ರಾಹಕರಿಗೆ ಗುಡ್ ನ್ಯೂಸ್ | ಕೋವಿಡ್ ಕಾರಣದಿಂದ ಫ್ರೆಶ್ ಅಧಿಸೂಚನೆ ಹೊರಡಿಸಿದ ಬ್ಯಾಂಕ್ !

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)  ಇತ್ತೀಚೆಗೆ ತನ್ನ ಗ್ರಾಹಕರಿಗೆ ಹೊಸ ಅಧಿಸೂಚನೆ (Notification) ಹೊರಡಿಸಿದೆ. ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ತಿಳಿಸಿರುವ ಎಸ್ಬಿಐ ಬ್ಯಾಂಕ್, ಹಣ ವಿತ್ ಡ್ರಾ ಮಾಡುವ ಹೊಸ ನಿಯಮಗಳ ಬಗ್ಗೆ ಹೇಳಿದೆ.

 

ಇದರ ಪ್ರಕಾರ, ಈಗ ಹೋಂ ಬ್ರಾಂಚ್ ಬಿಟ್ಟು ಬೇರೆ ಬ್ರಾಂಚ್ ಗಳಲ್ಲಿ ಹಣ ವಿತ್ ಡ್ರಾ (Cash Withdrawal) ಮಾಡುವ ಮಿತಿಯನ್ನು ಹೆಚ್ಚಿಸಲಾಗಿದ್ದು, ಇನ್ನು ಮುಂದೆ SBI ನ ಬೇರೆ ಬ್ರಾಂಚ್ ಗಳಲ್ಲಿ ಒಂದು ದಿನಕ್ಕೆ 25000 ರೂಪಾಯಿಗಳನ್ನು ವಿತ್ ಡ್ರಾ ಸ್ಲಿಪ್ ಬಳಸಿ ವಿತ್ ಡ್ರಾ ಮಾಡಬಹುದು.

ಚೆಕ್‌ನಿಂದ 1 ಲಕ್ಷ ರೂಪಾಯಿಗಳನ್ನು ತೆಗೆಯಬಹುದು :
ಆದರೆ, ಚೆಕ್ ಮೂಲಕ ಹಣ ವಿತ್ ಡ್ರಾ ಮಾಡುವ ಮಿತಿ 1 ಲಕ್ಷ ರೂಪಾಯಿ ವರೆಗೆ ಇರುತ್ತದೆ. 

ಇನ್ನು ಥರ್ಡ್ ಪಾರ್ಟಿಗೆ ಚೆಕ್ ಮೂಲಕ ಹಣ ವಿತ್ ಡ್ರಾ ಮಾಡಲು ಚೆಕ್ ನೀಡಿದರೆ, ಅದರಿಂದ ನಾನ್ ಹೋಂ ಬ್ರಾಂಚಿನಲ್ಲಿ ವಿದ್ ಡ್ರಾ ಮಾಡುವ ಮಿತಿಯನ್ನು 50 ಸಾವಿರ ರೂ.ಗೆ ಹೆಚ್ಚಿಸಲಾಗಿದೆ.

ಈ ಬಗ್ಗೆ SBI ಟ್ವೀಟ್ ಮಾಡಿ, ‘ಕೊರೋನಾ ಸಾಂಕ್ರಾಮಿಕ ರೋಗದಲ್ಲಿ ತನ್ನ ಗ್ರಾಹಕರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಎಸ್‌ಬಿಐ ಚೆಕ್ (Cheque) ಅಥವಾ ಸ್ಲಿಪ್ ಮೂಲಕ ಬೇರೆ ಬ್ರಾಂಚ್ ಗಳಲ್ಲಿ ಹಣ ವಿತ್ ಡ್ರಾ ಮಾಡುವ ಮಿತಿಯನ್ನು ಹೆಚ್ಚಿಸಲಾಗಿದೆ ಎಂದು ಹೇಳಿದೆ. ಈಗ ಗ್ರಾಹಕರು ಯಾವುದೇ ಬ್ರಾಂಚ್ ನಲ್ಲಿ ಒಂದು ದಿನಕ್ಕೆ ಉಳಿತಾಯ ಖಾತೆಯಿಂದ 25,000 ರೂಪಾಯಿಗಳನ್ನು ವಿತ್ ಡ್ರಾ ಮಾಡಬಹುದು.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಈ ಅಧಿಸೂಚನೆ ಪ್ರಕಾರ ಹೊಸ ನಿಯಮಗಳು ತಕ್ಷಣದಿಂದ ಜಾರಿಗೆ ತರಲಾಗಿದೆ. ಈ ನಿಯಮಗಳು ಸೆಪ್ಟೆಂಬರ್ 30, 2021 ರವರೆಗೆ ಜಾರಿಯಲ್ಲಿರುತ್ತವೆ ಎಂದು ಭಾರತದ ಸರಕಾರಿ ಬ್ಯಾಂಕಿಂಗ್ ದೈತ್ಯ SBI ತಿಳಿಸಿದೆ.

Leave A Reply

Your email address will not be published.