ಪಡೀಲ್ : ಮಹಡಿಯಿಂದ ಹಾರಿ‌ ಯುವಕ ಆತ್ಮಹತ್ಯೆ

ಮಂಗಳೂರು: ಯುವಕನೋರ್ವ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಮಂಗಳೂರು ಪಡೀಲ್ ಎಂಬಲ್ಲಿಂದ ವರದಿಯಾಗಿದೆ.

 

ಪಡೀಲ್ ನಿವಾಸಿ ಅವಿವಾಹಿತ ಯುವಕ 30ರ ಹರೆಯದ ಸಮೀರ್ ಎಂಬವರೇ ಆತ್ಮಹತ್ಯೆ ಮಾಡಿಕೊಂಡವರು.

ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಈತನಿಗೆ ಕೋವಿಡ್ ಪಾಸಿಟಿವ್ ಬಂದಿತ್ತು ಎನ್ನಲಾಗಿದೆ.

ಈ ಕುರಿತು ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.