5 ವರ್ಷ ಮಸ್ತಾಗಿ ಲಿವಿಂಗ್ – ಲವಿಂಗ್ ಟುಗೆದರ್ ನಡೆಸಿ ಈಗ ಬ್ಲ್ಯಾಕ್ ಮೇಲ್ | ಮಾಜಿ ಮಂತ್ರಿಯ ವಿರುದ್ಧ ಪೊಲೀಸರ ಮೊರೆ ಹೋದ ನಟಿ
ಸಚಿವರುಗಳ ಅಥವಾ ಅಧಿಕಾರಿಗಳ ರಾಸಲೀಲೆಯ ಸಿಡಿ ಹಾಗೂ ವಿಡಿಯೋ ಇಟ್ಟುಕೊಂಡು ಅವರನ್ನು ಬ್ಲಾಕ್ ಮೇಲ್ ಮಾಡುವುದು ಹಾಗೂ ಅವರಿಂದ ಹಣ ಪೀಕುವುದು ನೋಡಿದ್ದೇವೆ. ಇಂತಹದೇ ರಮೇಶ್ ಜಾರಕಿಹೊಳಿ ಅವರ ಸಿಡಿ ಪ್ರಕರಣವು ರಾಜ್ಯದಲ್ಲಿ ಬಹಳ ಸುದ್ದಿಯಾಗಿದ್ದು ಕೇಳಿದ್ದೇವೆ. ಆದರೆ ಈ ಘಟನೆ ವಿಚಿತ್ರ ಎಂದೆನಿಸುತ್ತದೆ. ಮಾಜಿ ಸಚಿವರೊಬ್ಬರು ನಟಿಯ ಅಶ್ಲೀಲ ವೀಡಿಯೊ ಮತ್ತು ಫೋಟೋಗಳನ್ನು ಮುಂದಿಟ್ಟುಕೊಂಡು ಆಕೆಯನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಪೊಲೀಸ್ ದೂರು ದಾಖಲಾಗಿದೆ.
ನಟಿ ಶಾಂತಿನಿ ದೇವಾ ತಾನು ಓರ್ವ ನಟಿಯಾಗಬೇಕು ಎಂಬ ಆಸೆಯಿಂದ ಚೆನ್ನೈಗೆ ಬಸ್ಸು ಹತ್ತಿ ಬಂದವರು. ಆದರೆ, ಆಕೆಗೆ ತಕ್ಷಣಕ್ಕೆ ಸಿನಿಮಾದಲ್ಲಿ ಒಳ್ಳೆಯ ಅವಕಾಶಗಳು ಲಭ್ಯವಾಗಲಿಲ್ಲ. ಚಿತ್ರರಂಗದಲ್ಲಿ ಸಣ್ಣಪುಟ್ಟ ಪಾತ್ರ ಮಾಡಿಕೊಂಡಿದ್ದಳು ಶಾಂತಿನಿ. ಅದಾಗಲೇ ಆಕೆ 2ಜಿ ಮತ್ತು ಮುಖ್ಯವಾಗಿ ನಾಡೋಡಿಗಲ್ ಎಂಬ ಚಿತ್ರಗಳಲ್ಲಿ ಅಭಿನಯಿಸಿ ತನ್ನ ನಟನಾ ಕೌಶಲ್ಯವನ್ನು ತೋರಿಸಿದ್ದಳು. ಈ ಸಂದರ್ಭದಲ್ಲಿ ಆಗ ಎಐಡಿಎಂಕೆ ಪಕ್ಷದಲ್ಲಿ ಸಚಿವರಾಗಿದ್ದ ಮಣಿಗಂಡನ್ ನ ಪರಿಚಯ ಆಗಿತ್ತು.
ಮೊದಲೇ ಆತ ಮಣಿಗಂಡನ್. ಆತ ವೃತ್ತಿಯಲ್ಲಿ ಮೆಡಿಕಲ್ ಡಾಕ್ಟರ್ ಆಗಿದ್ದ. ಮನಿ ಮತ್ತು ಗಂಡ ಎರಡೂ ಆತನಲ್ಲಿ ಆಕೆಗೆ ಕಾಣಸಿಗುತ್ತದೆ. ದುಡ್ಡಿಗೆ ಆತನಲ್ಲಿ ಏನೇನೂ ಕೊರತೆ ಇರಲಿಲ್ಲ. ಆದರೆ ಮೊದಲಿಗೆ ಅವರಿಬ್ಬರೂ ಕೇವಲ ಗೆಳೆಯರಾಗಿದ್ದರು. ತನ್ನ ಪತ್ನಿ ತಮಗೆ ತನ್ನನ್ನು ಕೇರ್ ಮಾಡುವುದಿಲ್ಲ, ಚೆನ್ನಾಗಿ ನೋಡಿಕೊಳ್ಳುವುದಿಲ್ಲ ಎಂದು ತನ್ನ ಪತ್ನಿಯನ್ನು ದೂರಿ ಅನುಕಂಪ ಗಿಟ್ಟಿಸಿಕೊಂಡಿದ್ದನಾತ. ಅದೇ ಗೆಳೆತನ ಕೆಲವೇ ದಿನಗಳಲ್ಲಿ ರಿಲೇಷನ್ ಶಿಪ್ ಆಗಿ ಬದಲಾಗಿತ್ತು.
ಇಬ್ಬರಲ್ಲೂ ಯೌವನ ಇತ್ತು. ಜತೆಗೆ ಆತನಲ್ಲಿ ಅಧಿಕಾರ ಬೇರೆ. ಹಾಗೆ ಅವರಿಬ್ಬರೂ 5 ವರ್ಷಗಳ ಕಾಲ ಸುಖವಾಗಿ ಲವಿಂಗ್ ಲಿವಿಂಗ್ ಮಾಡುತ್ತಾ ಕಾಲ ಕಳೆಯುತ್ತಾರೆ.
ಆದರೆ, ಎಷ್ಟಾದರೂ ಅಕ್ರಮ ಸಂಬಂಧಕ್ಕೆ ಆಯುಷ್ಯ ಕಮ್ಮಿ ಅಲ್ಲವೇ ? ಅಲ್ಲದೆ, ಇದೀಗ ಅವರಿಬ್ಬರ ಮಧ್ಯೆ ಹಿಂದಿನ ಸಾಮರಸ್ಯ ಕಮ್ಮಿ ಆಗಿತ್ತು. ಪರಸ್ಪರ ಇಬ್ಬರೂ ಒಬ್ಬರಿಗೊಬ್ಬರು ಬೋರ್ ಹೊಡೆಯಲು ಪ್ರಾರಂಭವಾಗಿದ್ದರು. ಅಲ್ಲದೆ, ಆತ ಅಧಿಕಾರ ಕಳೆದುಕೊಂಡಿದ್ದ. ಆಕೆಯಲ್ಲಿ ಭವಿಷ್ಯದ ಪ್ರಶ್ನೆ ಮೋದಿ ನಿಂತಿತ್ತು. ಪರಸ್ಪರ ಜೊತೆಗೆ ಇದ್ದು ಐದು ವರ್ಷ ಕಳೆದ ಮೇಲೆ ಇನ್ನಾದರೂ ಸರಿ ಈ ಸಂಬಂಧಕ್ಕೊಂದು ಅಫಿಶಿಯಲ್ ಮುದ್ರೆ ಬಿದ್ದರೆ ನೆಮ್ಮದಿಯಾಗಿ ಬದುಕಬಹುದು ಎಂದು ಆಕೆ ಅಂದುಕೊಂಡಿದ್ದಳು. ಅದರಂತೆ ಆಕೆ ಆತನನ್ನು ಮದುವೆಯಾಗಲು ಒತ್ತಾಯಿಸುತ್ತಾಳೆ. ಆದರೆ ಅದಾಗಲೇ ಆತನಿಗೆ.ಮಾಡುವೆ ಮಕ್ಕಳು ಎರಡೂ ಆಗಿ ಹೋಗಿದ್ದವು. ಈಕೆಯ ಜತೆಗಿನ ಸಂಬಂಧದ ಸಮಸ್ತವನ್ನೂ ಆತ ಹೀರಿ ಆಗಿತ್ತು. ಮತ್ತೆ ಈಕೆಯನ್ನು ಮದುವೆಯಾಗಿ ಮತ್ತೊಂದು ಹೊಸ ಜವಾಬ್ದಾರಿ ತೆಗೆದುಕೊಳ್ಳಲು ಆತನಿಗೆ ಯಾವುದೇ ಕಾರಣಕ್ಕೂ ಇಷ್ಟವಿರಲಿಲ್ಲ. ಕಮಿಟ್ ಆಗದೆ ಇರೋಣ ಅನ್ನುವ ಆತನ ನಿರ್ಧಾರ ಇಬ್ಬರಲ್ಲೂ ಇತ್ತೀಚೆಗೆ ಬೆಂಕಿ ಹತ್ತಿಸಿತ್ತು.
ಅಲ್ಲಿಂದ ಶುರುವಾದ ಮನಸ್ತಾಪ ಜಗಳ ಇದೀಗ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿದೆ.
ತಮಿಳುನಾಡಿನಲ್ಲಿ ಈ ಹಿಂದೆ ಅಧಿಕಾರದಲ್ಲಿ ಇದ್ದ ಎಐಎಡಿಎಂಕೆ ಸರ್ಕಾರದಲ್ಲಿ ಸಚಿವರಾಗಿದ್ದ ಮಣಿಗಂಡನ್ ಅವರು ನನ್ನ ಅಶ್ಲೀಲ ವಿಡಿಯೋ ಹಾಗೂ ಫೋಟೋಗಳನ್ನು ಮುಂದಿಟ್ಟುಕೊಂಡು ನನಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆಕೆ ಆರೋಪಿಸಿದ್ದಾಳೆ.
ಮಣಿಗಂಡನ್ ಈಕೆಯನ್ನು ಮದುವೆಯಾಗುವುದಾಗಿ ನಂಬಿಸಿದ್ದಾರೆ ಎನ್ನುವುದು ಆಕೆಯ ದೂರು. ಇಬ್ಬರೂ 5 ವರ್ಷ ಒಟ್ಟಿಗೆ ಸಂಸಾರ ಜೀವನವನ್ನೂ ಮಾಡಿದ್ದಾರೆ. ಆರೋಪಿ ಮಣಿಗಂಡನ್ ನಟಿಗೆ ಮನೆಯನ್ನೂ ಕೊಡಿಸಿದ್ದಾರೆ. ಆದರೆ, ನಟಿ ಶಾಂತಿನಿ ಇದೀಗ ತನ್ನನ್ನು ಮದುವೆಯಾಗುವಂತೆ ಮಣಿಗಂಡನನ್ನು ಪೀಡಿಸಿದ್ದಾಳೆ. ಆದರೆ, ಇದಕ್ಕೆ ಒಪ್ಪದ ಮಣಿಗಂಡನ್ ಆಕೆಯ ಅಶ್ಲೀಲ ಪೋಟೋ ಹಾಗೂ ವಿಡಿಯೋಗಳನ್ನು ತೋರಿಸಿ ಬೆದರಿಕೆ ಹಾಕುತ್ತಿದ್ದಾರೆ. ಇದಲ್ಲದೇ ಜನರನ್ನು ಬಿಟ್ಟು ಹತ್ಯೆ ಮಾಡುವುದಾಗಿಯೂ ಅವರು ಬೆದರಿಕೆ ಹಾಕಿದ್ದಾರೆ ಎನ್ನುವುದು ಈಗ ಸುದ್ದಿಯಲ್ಲಿರುವ ವಿಚಾರ.
ಅವರಿಬ್ಬರು ಜತೆಗಿದ್ದಾಗ ನಡೆಸಿದ ಕಾಮ ಸಲ್ಲಾಪಕ್ಕೆ ಸಂಬಂಧಿಸಿದ ಅಶ್ಲೀಲ ಪೋಟೋ ಮತ್ತು ವೀಡಿಯೋಗಳನ್ನು ತೆಗೆದಿಟ್ಟುಕೊಂಡಿದ್ದಾರೆ. ಗೌಪ್ಯವಾಗಿರಬೇಕಾಗಿದ್ದ ಈ ಫೋಟೋ ಮತ್ತು ವೀಡಿಯೋಗಳನ್ನು ಮುಂದಿಟ್ಟು ನನಗೆ ಬೆದರಿಕೆ ಹಾಕುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಡುವುದಾಗಿ ಬೆದರಿಸುತ್ತಿದ್ದಾರೆ ಎಂದು ಆರೋಪಿಸಿ ನಟಿ ಶಾಂತಿನಿ ದೇವಾ ತಮ್ಮ ದೂರಿನಲ್ಲಿ ತಿಳಿಸಿದ್ದು, ಮುಂದೆ ತನಿಖೆಗಳ ನಡೆಯುವಾಗ ಸತ್ಯ ಬಯಲಾಗಬೇಕಿದೆ.