ಆಹಾರ ಹಂಚಿದ ಸುಳ್ಯದ ಉದ್ಯಮಿ ವಿಖ್ಯಾತ್ ರೈ ಪಾಲ್ತಾಡು | ಸಂಕಷ್ಟದ ಸಮಯದಲ್ಲಿ ಮಾನವೀಯ ಕಾರ್ಯ

ಸುಳ್ಯದ ಕೆ.ಎಸ್. ಆರ್ ಟಿ.ಸಿ ಬಸ್ ನಿಲ್ದಾಣದ ಬಳಿ ಇರುವ ಸನ್ನಿಧಿ ಟವರ್ಸ್ ಹಾಗೂ ವಿಖ್ಯಾತ್ ವೈನ್ಸ್ ಮಾಲಕ ಯುವ ಉದ್ಯಮಿ ವಿಖ್ಯಾತ್ ರೈ ಪಾಲ್ತಾಡು ಅವರು ಸುಳ್ಯದ ಮುಖ್ಯ ರಸ್ತೆಯ ಮೂಲಕ ಹಾದು ಹೋಗುವ ಬಸ್, ಲಾರಿ,ಅಂಬ್ಯುಲೆನ್ಸ್ ಮುಂತಾದ ಅಗತ್ಯ ಸಾಮಾಗ್ರಿಗಳ ಸಾಗಾಟದ ವಾಹನ ಚಾಲಕರಿಗೆ, ಫೋಲೀಸ್ ಇಲಾಖೆಯ, ಅಬಕಾರಿ ಇಲಾಖೆಯ ಸಿಬ್ಬಂದಿಯವರಿಗೆ, ಗೃಹರಕ್ಷಕ ದಳದವರಿಗೆ, ನಗರದಲ್ಲಿರುವ ನಿರ್ಗತಿಕರಿಗೆ (ಬಿರಿಯಾನಿ ) ಆಹಾರದ ಪೊಟ್ಟಣ ವಿತರಿಸಿದ್ದಾರೆ.

 

ತಮ್ಮ ಹೋಟೆಲ್‌ನಲ್ಲಿ ಚಿಕನ್ ಬಿರಿಯಾನಿ ಮತ್ತು ವೆಜ್ ಬಿರಿಯಾನಿ ತಯಾರಿಸಿ ಪ್ಯಾಕೆಟ್ ಮಾಡಿ ಅವಶ್ಯಕತೆ ಇರುವ ಎಲ್ಲರಿಗೂ ತಾವೇ ಹಂಚಿದರು.

ಲಾಕ್ ಡೌನ್‌ನ ಸಂಕಷ್ಟದ ಸಮಯದಲ್ಲಿ ಊಟ,ತಿಂಡಿ ಸಿಗುವುದೇ ಕಷ್ಟಕರ.ಇಂತಹ ಸಮಯದಲ್ಲಿ ಸುಮಾರು 250ಕ್ಕೂ ಅಧಿಕ ಮಂದಿಗೆ ಆಹಾರದ ಪ್ಯಾಕೆಟ್ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಇವರಿಗೆ ಇವರ ಸಹೋದರನೂ ಸಾಥ್ ನೀಡಿದ್ದಾರೆ.

ಇವರ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣದ ಮೂಲಕ ಸಾರ್ವಜನಿಕರಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

ಸಾಮಾಜಿಕ ಮುಂದಾಳುವಾಗಿ ಗುರುತಿಸಿಕೊಂಡಿದ್ದ ದಿ.ವಿಜಯ ರೈ ಪಾಲ್ತಾಡು ಅವರ ಮಗನಾಗಿರುವ ವಿಖ್ಯಾತ್ ರೈ ಅವರು ತನ್ನ ತಂದೆಯಂತೆಯೇ ಸಾಮಾಜಿಕ ಚಿಂತನೆ ಮೈಗೂಡಿಸಿಕೊಂಡಿದ್ದಾರೆ.

Leave A Reply

Your email address will not be published.