ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ನೆರವಾಗಲು ಸಿಎಂ ಯಡಿಯೂರಪ್ಪ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಮನವಿ
ಬೆಂಗಳೂರು : ಕೋವಿಡ್ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಪತ್ರಕರ್ತರನ್ನು ಪ್ಯಾಕೇಜ್ ನಲ್ಲಿ ಸೇರಿಸಿ ತಲಾ 10 ಸಾವಿರ ರೂ. ನೆರವು ನೀಡಬೇಕು. ಕೋವಿಡ್ ಸೋಂಕಿನಿಂದ ಮೃತಪಟ್ಟ ಪತ್ರಕರ್ತ ಕುಟುಂಬಕ್ಕೆ ತಲಾ 5 ಲಕ್ಷ ರೂ ನೆರವು ನೀಡಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮನವಿ ಸಲ್ಲಿಸಿದೆ.
ಪತ್ರಿಕಾ ವಿತರಕರು ಮತ್ತು ಕೇಬಲ್ ಟಿವಿ ಆಪರೇಟರ್ಸ್ ಗಳಿಗೆ ಕೋವಿಡ್ ಲಸಿಕೆ ನೀಡಬೇಕು. ಪತ್ರಕರ್ತರ ಕುಟುಂಬ ಸದಸ್ಯರಿಗೂ ಆದ್ಯತೆ ಮೇಲೆ ಲಸಿಕೆ ಕೊಡಿಸಬೇಕು ಎಂದು ಸಂಘ ಒತ್ತಾಯಿಸಿದೆ.
ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಗಿದ್ದು, ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವ ಭರವಸೆಯನ್ನು ಸಿಎಂ ಯಡಿಯೂರಪ್ಪ ಅವರು ನೀಡಿದ್ದಾರೆ.
ನಿಯೋಗದಲ್ಲಿ ಪಬ್ಲಿಕ್ ಟಿವಿ ರವೀಶ್, ಟಿವಿ9 ಕಿರಣ್, ದಿಗ್ವಿಜಯ ಟಿವಿಯ ಮಾರುತಿ ಪಾವಗಡ ಮತ್ತಿತರರು ಇದ್ದರು.