ತೆಲಂಗಾಣ | ತಾಯಿಯ ಶವ ಮುಂದೆ ಇಟ್ಟುಕೊಂಡು ಮದುವೆಯಾದ ಮಗ
ತೆಲಂಗಾಣ : ತಾಯಿಯ ಮೃತದೇಹದ ಎದುರಿಗಿಟ್ಟುಕೊಂಡು ಯುವಕನೋರ್ವ ವಿವಾಹವಾದ ಘಟನೆ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆ ಇಸ್ಮಾಯಿಲ್ ಖಾನ್ ಪೇಟ್ ನಲ್ಲಿ ನಡೆದಿದೆ.
ಅಮೆರಿಕದಲ್ಲಿ ಉದ್ಯೋಗಿಯಾಗಿದ್ದ ರಾಕೇಶ್ ಎಂಬಾತನ ವಿವಾಹ ಮೇ 21 ರಂದು ನಿಶ್ಚಯವಾಗಿತ್ತು. ಇದಕ್ಕಾಗಿ ಆತ ಅಮೆರಿಕಾದಿಂದ ಊರಿಗೆ ಬಂದಿದ್ದ.
ಮನೆಯಲ್ಲಿ ಆತನ ಮಾವ ಕೊರೊನಾ ಬಂದು ಮೃತಪಟ್ಟಿದ್ದರು. ಮಾವನ ಸಾವಿನ ಬೆನ್ನಲ್ಲೇ ರಾಕೇಶ್ ತಾಯಿಗೆ ಕೋವಿಡ್ ಸೋಂಕು ತಗುಲಿದೆ ಹಾಗೂ
ಅವರನ್ನು ಹೈದರಾಬಾದ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಉಸಿರಾಟದ ಸಮಸ್ಯೆಯಿಂದ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ತಾಯಿಯ ಆಶೀರ್ವಾದ ಪಡೆದು ಮದುವೆಯಾಗಬೇಕೆಂಬ ಆಸೆಯಿಂದ ಅಮೆರಿಕಾದಿಂದ ಊರಿಗೆ ಬಂದಿದ್ದ ರಾಕೇಶ್ ಕೊನೆಗೆ ತಾಯಿಯ ಮೃತದೇಹದ ಎದುರಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾನೆ. ಮದುವೆ ಸಂಭ್ರಮ ಇದ್ದೂ ಕಣ್ಣೀರಲ್ಲೇ ಮದುವೆಯಾಗಿದ್ದಾನೆ.
ಮದುವೆ ಆದರೂ ಇದೊಂದು ಸೂತಕದ ಮದುವೆಯಾಗಿತ್ತು. ಮದುವೆಗೆ ಬಂದವರು ಯಾರು ಖುಷಿಯಿಂದ ಇರದೆ ಕಣ್ಣೀರು ಸುರಿಸುತ್ತಿದ್ದರು.