ಹಣ ಕೊಟ್ಟರೆ ಗಾಡಿ ಬಿಡ್ತೀನಿ | ಸಂಪಾಜೆ ಗಡಿಯಲ್ಲಿ ಲಂಚಕ್ಕೆ ಕೈಯೊಡ್ಡುವ ಅರಣ್ಯ ಇಲಾಖೆಯ ಸಿಬ್ಬಂದಿ

ಸುಳ್ಯ: ಸುಳ್ಯ- ಕೊಡಗು ಗಡಿ ಭಾಗದಲ್ಲಿ ಬರುವ ಅರಣ್ಯ ಇಲಾಖೆಯ ಚೆಕ್ ಪೋಸ್ಟ್ ನಲ್ಲಿ, “ಹಣ ಕೊಟ್ಟರೆ ಮಾತ್ರ ಗಾಡಿ ಬಿಡ್ತೇನೆ” ಎಂದು ಅರಣ್ಯ ಇಲಾಖೆಯ ಸಿಬಂದಿಯೊಬ್ಬರು ಲಂಚ ಕೇಳುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

ಇಂತಹ ಸಿಬಂದಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಸುಳ್ಯ ಗಡಿ ಪ್ರದೇಶದ ಸಂಪಾಜೆ ಚೆಕ್‌ ಪೋಸ್ಟ್‌ ಮೂಲಕ ದಾಟುವ ಪ್ರತಿಯೊಂದು ಮರ ಅಥವಾ ಮರದ ಉತ್ಪನ್ನಗಳನ್ನು ಸಾಗಿಸುವ ಲಾರಿಗಳು ಸರಿಯಾದ ದಾಖಲೆಗಳನ್ನು ಹೊಂದಿದ್ದರೂ 300 ರೂ. ನಿಂದ 500 ರೂ. ವರೆಗೆ ಚೆಕ್ ಪೋಸ್ಟ್ ಸಿಬ್ಬಂದಿಗೆ ನೀಡಬೇಕೆಂಬುದು ಚಾಲಕರ ಆರೋಪ.

ಇದಕ್ಕೆ ಪೂರಕ ಎಂಬಂತೆ ಅಧಿಕಾರಿಯೋರ್ವರು ಹಣಕ್ಕೆ ಬೇಡಿಕೆಯಿಡುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗುತ್ತಿದೆ.

ಲಾಕ್ ಡೌನ್ ನ ಈ ಕಾಲದಲ್ಲೂ ನಾಚಿಕೆ,ಮಾನ,ಮರ್ಯಾದೆ ಬಿಟ್ಟು ಲಂಚ ಪಡೆಯುತ್ತಿರುವವರ ವಿರುದ್ಧ ಅರಣ್ಯ ಸಚಿವರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Leave A Reply

Your email address will not be published.