ಹಾವನ್ನು ಕೊಂದು ಹಸಿಯಾಗಿ ತಿಂದ ವ್ಯಕ್ತಿ | ಯಾಕೆ ತಿಂದೆ ಎಂದು ಕೇಳಿದರೆ ಆತ ಕೊಟ್ಟ ಉತ್ತರಕ್ಕೆ ಪೊಲೀಸರೇ ಬೆಚ್ಚಿ ಬಿದ್ದಿದ್ದರು

ಹಾವನ್ನು ಕೊಂದು ತಿನ್ನುವ ವಿಡಿಯೋ ರೆಕಾರ್ಡ್ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ತಮಿಳುನಾಡಿನ ವ್ಯಕ್ತಿಯನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ ಬಂಧಿಸಲಾಗಿದೆ.

 

ವೈರಲ್ ಆಗಿರುವ ಆ ವಿಡಿಯೋದಲ್ಲಿ ವಡಿವೇಲು ಎಂಬಾತ ಹಾವನ್ನು ತಿನ್ನುತ್ತಿರುವ ಭಯಾನಕ ದೃಶ್ಯವಿದ್ದು, ಆ ಮೂಲಕ ಜನರನ್ನು ಭಯ ಪಡಿಸಿದ್ದಾನೆ.

ತಮಿಳುನಾಡಿನ ತಿರುನೆಲ್ವೇಲಿಯ ಪೆರುಮಾಲಪಟ್ಟಿ ಗ್ರಾಮದ ಈತನ ವಿಡಿಯೋ ನೋಡಿ ಶಾಕ್ ಆದ ಪರಿಸರವಾದಿಗಳು ಅದನ್ನು ಪೊಲೀಸರ ಗಮನಕ್ಕೆ ತಂದಿದ್ದಾರೆ. ಇದರ ಬೆನ್ನಲ್ಲೇ ಕಾರ್ಯಾಚರಣೆಗೆ ಇಳಿದ ಪೊಲೀಸರು ಆರೋಪಿ ವಡಿವೇಲುನನ್ನು ಬಂಧಿಸಿದ್ದಾರೆ.

ಯಾಕಯ್ಯ ಇಂತಹಾ ಅತಿಮಾನುಷ ಕೆಲಸ ಮಾಡಿದ್ದೀಯ ಎಂದಾತನನ್ನು ಕೇಳಿದರೆ, ಆತ ಕೊಟ್ಟ ಉತ್ತರಕ್ಕೆ ಪೊಲೀಸರು ಕೂಡ ತಂಡ ಹೊಡೆಯುವಂತ ಉತ್ತರವನ್ನು ಆತ ಹೇಳಿದ್ದಾನೆ.

ಹಾವನ್ನು ತಿನ್ನುವುದರಿಂದ ಕೊರೋನ ಹತ್ತಿರ ಕೂಡ ಸುಳಿಯುವುದಿಲ್ಲ. ಹಾವಿನ ಮಾಂಸ ಮಹಾಮಾರಿ ಸೋಂಕಿಗೆ ಮಹಾಮದ್ದು ಎಂದು ಆತ ಮರು ವಾದಿಸಿದ್ದಾನೆ.

ಹತ್ತಿರದ ಮೈದಾನವೊಂದರಲ್ಲಿ ಹಾವನ್ನು ಹಿಡಿದಿದ್ದಾಗಿ ಮತ್ತು ಅದನ್ನು ಕೊಂದು ತಿಂದಿದ್ದಾಗಿ ವಿಚಾರಣೆ ವೇಳೆ ವಡಿವೇಲು ತಪ್ಪೋಪ್ಪಿಕೊಂಡಿದ್ದಾನೆ. ಕೊರೊನಾ ವೈರಸ್‌ನಿಂದ ರಕ್ಷಿಸಿಕೊಳ್ಳಲು ಹಾವನ್ನು ಹಿಡಿದು ತಿಂದಿದ್ದಾಗಿ ಹೇಳಿಕೊಂಡಿದ್ದಾನೆ. ಕೋರೋನಾ ರೋಗ ಅಪಾಯಕಾರಿಯಾದದ್ದು. ಅಂತಹ ಅಪಾಯಕಾರಿ ರೋಗವನ್ನು ಅದಕ್ಕಿಂತ ಹೆಚ್ಚು ಅಪಾಯಕಾರಿಯಾಗಿರುವ ವಿಷವುಳ್ಳ ಹಾವು ಕೊಲ್ಲಬಲ್ಲುದು ಎಂದಾತ ವಿವರಣೆ ಬೇರೆ ನೀಡಿದ್ದಾನೆ.

ಯಾವುದೇ ವಿಷ ಜಂತುವನ್ನು ಮತ್ತು ಪ್ರಾಣಿಗಳನ್ನು ಕೊಂದು ತಿನ್ನುವುದು ಅತ್ಯಂತ ಅಪಾಯಕಾರಿ. ಆ ಪ್ರಾಣಿಗಳಲ್ಲಿನ ರೋಗಕಾರಕಗಳು ಮತ್ತೊಬ್ಬರ ದೇಹಕ್ಕೆ ಹೆಚ್ಚು ಹಾನಿಯನ್ನು ಉಂಟುಮಾಡುತ್ತದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಆತನಿಗೆ 7,500 ರೂಪಾಯಿ ದಂಡವನ್ನು ಸಹ ವಿಧಿಸಲಾಗಿದೆ.

Leave A Reply

Your email address will not be published.