‘ಯಾಸ್’ ಚಂಡಮಾರುತ ಅಬ್ಬರಿಸುತ್ತಿದ್ದಾಗ ಜನನವಾದ ಶಿಶುಗಳಿಗೆ ‘ಯಾಸ್’ ಎಂದು ನಾಮಕರಣ

ಭುವನೇಶ್ವರ: ಯಾಸ್ ಚಂಡಮಾರುತವು ಓಡಿಶಾ ರಾಜ್ಯವನ್ನು ಅಲ್ಲೋಲಕಲ್ಲೋಲ ಮಾಡಿದೆ. ಚಂಡಮಾರುತದಿಂದಾಗಿ ರಾಜ್ಯದಾದ್ಯಂತ ವ್ಯಾಪಕ ವಿನಾಶ ಉಂಟಾಗಿದೆ. ಇದರ ನಡುವೆ ಕರಾವಳಿ ರಾಜ್ಯದಲ್ಲಿ 300 ಕ್ಕೂ ಹೆಚ್ಚು ಜನನಗಳನ್ನು ನೋಂದಾಯಿಸಲಾಗಿದೆ. ಕೆಲವು ಕುಟುಂಬಗಳು ಭೀಕರ ಚಂಡಮಾರುತದ ನಂತರ ತಮ್ಮ ನವಜಾತ ಶಿಶುಗಳ ಹೆಸರನ್ನು ‘ಯಾಸ್’ ಎಂದು ಹೆಸರು ನೀಡಿದ್ದಾರೆ ಎಂಬ ಅಚ್ಚರಿಯ ಸಂಗತಿ ವರದಿಯಾಗಿದೆ.

 

ಚಂಡಮಾರುತವು ದೇಶದ ಪೂರ್ವ ಕರಾವಳಿಯನ್ನು ಸಮೀಪಿಸುತ್ತಿರುವಾಗ ಒಡಿಶಾದಲ್ಲಿ ಹಲವಾರು ಮಕ್ಕಳು ಜನಿಸಿದರು. ಬಾಲಸೋರ್ ಜಿಲ್ಲೆಯಿಂದ ದಕ್ಷಿಣಕ್ಕೆ 50 ಕಿ.ಮೀ. ಬಾಲಸೋರ್‌ನ ಪರಾಖಿ ಪ್ರದೇಶದ ನಿವಾಸಿ ಸೋನಾಲಿ ಮೈಟಿ, ತನ್ನ ಮಗನಿಗೆ ” ಯಾಸ್ ” ಗಿಂತ ಉತ್ತಮವಾದ ಹೆಸರನ್ನು ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಕೇಂದ್ರಪರಾ ಜಿಲ್ಲೆಯ ಸರಸ್ವತಿ ಬೈರಗಿ ಅವರು ಚಂಡಮಾರುತದ ನಂತರ ತನ್ನ ನವಜಾತ ಶಿಶುವಿಗೆ ಯಾಸ್ ಎಂದು ಹೆಸರಿಟ್ಟರು. ರಾಜ್ಯದ ಇತರ ಭಾಗಗಳಿಂದಲೂ ಇದೇ ರೀತಿಯ ವರದಿಗಳು ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕೃತಿಯ ವಿಕೋಪದ ಮಧ್ಯೆ 300 ಕ್ಕೂ ಹೆಚ್ಚು ಜನನಗಳು ದಾಖಲಾಗಿವೆ, ಪೋಷಕರು ನವಜಾತ ಶಿಶುಗಳಿಗೆ ‘ಯಾಸ್’ ಎಂದು ಹೆಸರಿಸಲು ಮುಂದಾಗುತ್ತಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈಗಾಗಲೇ ಯಾಸ್ ಚಂಡಮಾರುತಕ್ಕೆ 10ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಲಕ್ಷಾಂತರ ಮಂದಿಯನ್ನು ಕರಾವಳಿ ಪ್ರದೇಶದಿಂದ ಸ್ಥಳಾಂತರಿಸಲಾಗಿತ್ತು. ಸಾವಿರಾರು ಮಂದಿ ತಮ್ಮ ನಿವಾಸಗಳನ್ನು ಕಳೆದುಕೊಂಡಿದ್ದಾರೆ. ಈ ಮಧ್ಯೆ ಹುಟ್ಟಿದ ಮಕ್ಕಳಿಗೆ ಚಂಡಮಾರುತದ ಹೆಸರನ್ನು ಇಟ್ಟಿರುವುದು ವಿಶೇಷವಾಗಿದೆ ಎಂಬುದು ಹಲವರ ಅಭಿಪ್ರಾಯವಾಗಿದೆ.

Leave A Reply

Your email address will not be published.