ಬೆಳ್ತಂಗಡಿ |ಬ್ಲಾಕ್ ಫಂಗಸ್ ಗೆ ತಾಲೂಕಿನಲ್ಲಿ ಮೊದಲ ಬಲಿ

ಕೊರೊನಾದ ಜೊತೆಜೊತೆಗೆ ಮತ್ತಷ್ಟು ಆತಂಕ ಹುಟ್ಟಿಸಿದ್ದ ಬ್ಲಾಕ್ ಫಂಗಸ್ ಗೆ ಬೆಳ್ತಂಗಡಿಯ ವ್ಯಕ್ತಿಯೋರ್ವರು ಮೃತಪಟ್ಟಿದ್ದಾರೆ.

 

ಬೆಳ್ತಂಗಡಿ ತಾಲೂಕಿನ ತಣ್ಣೀರುಪಂತ ಗ್ರಾಮದ ಅಳಕೆ ನಿವಾಸಿ ನೋಣಯ್ಯ ಪೂಜಾರಿ (55) ಬ್ಲ್ಯಾಕ್ ಫಂಗಸ್ ವೈರಸ್‌ಗೆ ಬಲಿಯಾದ ವ್ಯಕ್ತಿ.

ಬೆಳ್ತಂಗಡಿ ತಾಲೂಕಿನಲ್ಲಿ ಬ್ಲಾಕ್ ಫಂಗಸ್ ಗೆ ಮೊದಲ ಬಲಿಯಾಗಿದೆ. ಲಾಕ್ ಡೌನ್ ನಿಂದ ಕೊರೊನಾ ಸಂಖ್ಯೆ ಇಳಿಮುಖವಾಗಿತ್ತಿದೆ, ಆದರೆ ಬ್ಲಾಕ್ ಫಂಗಸ್ ಸೃಷ್ಟಿಯಾಗಿರುವುದು ಆತಂತ ಹುಟ್ಟಿಸಿದೆ.

ನೋಣಯ್ಯ ಪೂಜಾರಿ ಇವರಿಗೆ ಕಣ್ಣು ಮತ್ತು ಕಿಡ್ನಿ ಸಮಸ್ಯೆ ಇದ್ದುದರಿಂದ ಕೆಲ ದಿನಗಳಿಂದ ಮಂಗಳೂರಿನ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಈ ವೇಳೆ ಕೊರೊನಾ ಪರೀಕ್ಷೆ ನಡೆಸಿದಾಗ ಪಾಸಿಟಿವ್ ವರದಿ ಬಂದಿತ್ತು.

ಈ ವೇಳೆ ಬ್ಲ್ಯಾಕ್ ಫಂಗಸ್ ಲಕ್ಷಣಗಳು ಗೋಚರಿಸಿದ್ದು, ಕಣ್ಣಿನ ಆಪರೇಷನ್ ನಡೆಸಿದ ವೈದ್ಯರು ಬದುಕಿ ಉಳಿಯುವುದು ಕಷ್ಟ ಎಂದಿದ್ದರು. ಬಳಿಕ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಚಿಕಿತ್ಸೆಗೆ ಸ್ಪಂದಿಸದೆ ಮೇ 27ರಂದು ಮೃತಪಟ್ಟಿದ್ದಾರೆ.

ಇಷ್ಟು ದಿನ ಕೊರೋನ ಬಗ್ಗೆ ಚಿಂತೆಗೀಡಾಗಿದ್ದ ತಾಲೂಕಿನ ಜನತೆಗೆ ಬ್ಲಾಕ್ ಫಂಗಸ್ ಮೊದಲ ಬಲಿಯೊಂದಿಗೆ ದೊಡ್ಡ ಶಾಕ್ ನೀಡಿದೆ.

Leave A Reply

Your email address will not be published.