ಭಾರತದಂತಹ ಬಹುದೊಡ್ಡ ಪ್ರಜಾಪ್ರಭುತ್ವ ದೇಶಕ್ಕೆ ಪಾಠ ಮಾಡಲು ಹೊರಟ ಟ್ವಿಟ್ಟರ್ | ಮುಟ್ಟಿ ನೋಡಿಕೊಳ್ಳುವಂತಹ ಏಟು ಕೊಟ್ಟ ಕೇಂದ್ರ

 

ಭಾರತದಲ್ಲಿನ ತನ್ನ ಸಿಬ್ಬಂದಿಗಳ ಸುರಕ್ಷತೆಯ ಬಗ್ಗೆ ಕಾಳಜಿ ವ್ಯಕ್ತಪಡಿಸಿ, ದೇಶದ ಹೊಸ ಐಟಿ ಕಾನೂನುಗಳಿಂದ ಅಭಿಪ್ರಾಯ ಸ್ವಾತಂತ್ರ್ಯಕ್ಕೆ ಕುತ್ತು ಉಂಟಾಗುವ ಸಾಧ್ಯತೆ ಇದೆ ಎಂದು ಟ್ವಿಟ್ಟರ್ ಹೇಳಿಕೆ ನೀಡಿತ್ತು. ಇದೀಗ ಆ ಹೇಳಿಕೆಗೆ ಕೇಂದ್ರ ಸರಕಾರ ಸಕತ ಖಾರದ, ಮುಟ್ಟಿ ನೋಡಿಕೊಳ್ಳಬೇಕು ಅಂತಹ ಉತ್ತರನೀಡಿದೆ.

ಟ್ವಿಟರ್​ ಇಂಡಿಯಾದ ದೆಹಲಿ ಮತ್ತು ಗುರ್ಗಾವ್​ನ ಕಛೇರಿಗಳಿಗೆ ಸೋಮವಾರ ದೆಹಲಿ ಪೊಲೀಸ್​ ರು ಭೇಟಿ ನೀಡಿ ದ್ದರು. ಮತ್ತು ಅವರು ತನಿಖೆಯಲ್ಲಿ ಪಾಲ್ಗೊಳ್ಳಲು ನೋಟೀಸ್​ ನೀಡಿದ್ದ ಹಿನ್ನೆಲೆಯಲ್ಲಿ ಟ್ವಿಟರ್ ಈ ಹೇಳಿಕೆ ನೀಡಿತ್ತು.

ಈ ಬಗ್ಗೆ ತಿರುಗೇಟು ನೀಡಿರುವ ಕೇಂದ್ರ ಸರ್ಕಾರ, ವಾಕ್​ಸ್ವಾತಂತ್ರ್ಯಕ್ಕೆ ಶತಮಾನಗಳಿಂದಲೂ ಮನ್ನಣೆ ಕೊಡುತ್ತಾ ಬಂದಿರುವ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ಭಾರತ. ಇದಕ್ಕೆ ಟ್ವಿಟರ್​​ ತನ್ನ ನಿಯಮಗಳನ್ನು ನಿರ್ದೇಶಿಸುವ ಪ್ರಯತ್ನ ಮಾಡುತ್ತಿದೆ. “ವಾಕ್​ಸ್ವಾತಂತ್ರ್ಯ ಒಂದು ವಿದೇಶೀ ಲಾಭಾಕಾಂಕ್ಷಿ ಕಂಪೆನಿಯಾದ ಟ್ವಿಟರ್​ನ ಸ್ವತ್ತಲ್ಲ. ಅದು ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ ಮತ್ತು ಅದರ ಸಂಸ್ಥೆಗಳ ( ಭಾರತದ) ಬದ್ಧತೆಯಾಗಿದೆ” ಎಂದು ಹೇಳಿದೆ. “ತನ್ನ ತಪ್ಪುಗಳನ್ನು ಮುಚ್ಚಿಟ್ಟುಕೊಂಡು, ವಿನಾಕಾರಣ ಭಾರತಕ್ಕೆ ಕೆಟ್ಟ ಹೆಸರು ತರುವಂತಹ ಆಧಾರವಿಲ್ಲದ ಹೇಳಿಕೆಯನ್ನು ಟ್ವಿಟರ್​ ನೀಡಿರುವುದು ಖಂಡನೀಯ” ಎಂದು ಬಿಸಿ ಮುಟ್ಟಿಸಿದೆ.

ಎಲೆಕ್ಟ್ರಾನಿಕ್ಸ್​ ಮತ್ತು ಇನ್​ಫರ್ಮೇಷನ್ ಟೆಕ್ನಾಲಜಿ ಸಚಿವಾಲಯವು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಟ್ವಿಟರ್ ಸಂಸ್ಥೆಯು ತನ್ನ ನಡವಳಿಕೆಯಿಂದ ಮತ್ತು ನಿಯಮಗಳನ್ನು ಪಾಲಿಸಲು ನಿರಾಕರಿಸುವ ಮೂಲಕ ಭಾರತದ ಕಾನೂನು ವ್ಯವಸ್ಥೆಯನ್ನು ಅಪಮಾನಿಸುತ್ತಿದೆ ಎಂದಿದೆ. ಟ್ವಿಟರ್​ ಯದ್ವಾತದ್ವಾ ಮಾತನಾಡುವುದನ್ನು ಬಿಟ್ಟು, ದೇಶದ ಕಾನೂನುಗಳನ್ನು ಪಾಲಿಸಬೇಕು ಎಂದಿದೆ ಸಚಿವಾಲಯ.

“ಕಾನೂನುಗಳನ್ನು ರಚಿಸುವುದು ಸರ್ಕಾರದ ಕೆಲಸ. ಕೇವಲ ಒಂದು ಸಾಮಾಜಿಕ ಮಾಧ್ಯಮ ವೇದಿಕೆಯಾದ ಟ್ವಿಟರ್ ಆ ಬಗ್ಗೆ ನಿಯಮಗಳನ್ನು ಹೇಳುವ ಅರ್ಹತೆ ಹೊಂದಿಲ್ಲ” ಎಂದಿದೆ. ಕೇವಲ ಭಾರತದ ಸರಕಾರದ ವಿರೋಧವಾಗಿ ಸದಾ ಮಾತಾಡುವ, ಎಡಪಂಥೀಯ ಉದ್ದೇಶಪೂರಿತ ಮಾಧ್ಯಮವಾಗಿರುವ ಟ್ವಿಟ್ಟರ್ ಇನ್ನಾದರೂ ಬುದ್ದಿ ಕಲಿತುಕೊಂಡು ಅನ್ ಬಯಾಸ್ಡ್ ಆಗಿ ಕಾರ್ಯ ನಿರ್ವಹಿಸು ವುದೇ ಎಂದು ಕಾದು ನೋಡಬೇಕಾಗಿದೆ.

Leave A Reply

Your email address will not be published.