ಬೆಂಗಳೂರಿನಲ್ಲಿ ನಡೆದ ನಿರ್ಭಯಾ ರೀತಿಯ ಅತ್ಯಾಚಾರ, ಇಂದು ಪೊಲೀಸರಿಂದ ಆರೋಪಿಗಳ ಮೇಲೆ ಫೈರಿಂಗ್

ರಾಜಧಾನಿ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ, ತಡವಾಗಿ ಬೆಳಕಿಗೆ ಬಂದ ಗ್ಯಾಂಗ್ ರೇಪ್ ಪ್ರಕರಣದ ಆರೋಪಿಗಳ ಮೇಲೆ ಇಂದು ಪೊಲೀಸರಿಂದ ಫೈರಿಂಗ್ ನಡೆದಿದೆ.ನಿರ್ಭಯಾ ಅತ್ಯಾಚಾರ ಪ್ರಕರಣವನ್ನು ಹೋಲುವ ಈ ಪ್ರಕರಣವು ಹತ್ತು ದಿನಗಳ ಬಳಿಕ ವಿಡಿಯೋ ಮೂಲಕ ಬೆಳಕಿಗೆ ಬಂದಿತ್ತು.ಇದನ್ನಾಧಾರಿಸಿ ಆರೋಪಿಗಳನ್ನು ಬೆಂಗಳೂರು ಪೊಲೀಸರು ಹೆಡೆಮುರಿ ಕಟ್ಟಿದ್ದರು.

 

ಬಂಧಿತ ಆರೋಪಿಗಳನ್ನು ಇಂದು ಸ್ಥಳ ಮಹಜರಿಗೆಂದು ಪೊಲೀಸರು ಕರೆದುಕೊಂಡು ಹೋದಾಗ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಪೊಲೀಸರು ಆತ್ಮರಕ್ಷಣೆಗಾಗಿ ಇಬ್ಬರೂ ಆರೋಪಿಗಳ ಕಾಲಿಗೆ ಗುಂಡು ಹಾರಿಸಿದ್ದಾರೆ.ಆರೋಪಿಗಳಾದ ರಿಯಾದ್ ಬಾಬು ಬಲಗಾಲಿಗೆ ಹಾಗೂ ಸಾಗರ್ ನ ಎಡಗಾಲಿಗೆ ಗುಂಡು ತಾಗಿದ್ದು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೂರ್ವಾ ವಿಭಾಗದ ಡಿ.ಸಿ.ಪಿ. ಡಾ|ಶರಣಪ್ಪ ತಿಳಿಸಿದ್ದಾರೆ.

ಘಟನೆಯ ವಿವರ:
ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ನಿರ್ಭಯಾ ಪ್ರಕರಣವನ್ನು ಹೋಲುವ ಅತ್ಯಾಚಾರ ಪ್ರಕರಣ ನಡೆದಿದ್ದು, ಬಳಿಕ ತಡವಾಗಿ ಬೆಳಕಿಗೆ ಬಂದಿತ್ತು. ಆರೋಪಿಗಳು ಯುವತಿಯನ್ನು ಅತ್ಯಾಚಾರಗೈದು ಗುಪ್ತಾಂಗಕ್ಕೆ ಮದ್ಯದ ಬಾಟಲ್ ಇರಿಸಿ ವಿಕೃತಿ ಮರೆದಿದ್ದರು.

10 ದಿನಗಳ ಹಿಂದೆ ನಡೆದಿದ್ದ ಈ ವಿಕೃತ ಕಾರ್ಯದ ವೀಡಿಯೋ ವೈರಲ್ ಆದ ಬಳಿಕ ಪ್ರಕರಣ ಬೆಳಕಿಗೆ ಬಂದಿದ್ದು, ನಾಲ್ವರು ಕಾಮುಕ ಆರೋಪಿಗಳಿಗೆ ಇಬ್ಬರು ಯುವತಿಯರು ಸಾಥ್ ನೀಡಿದ್ದಾರೆ ಎಂಬ ವಿಷಯವೂ ಬಹಿರಂಗವಾಗಿ ಬೆಳಕಿಗೆ ಬಂದಿದೆ.

ಬಂಧಿತ ಆರೋಪಿಗಳು ಬಾಂಗ್ಲಾ ಮೂಲದವರಾಗಿದ್ದು, ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದರು ಎಂಬ ಮಾಹಿತಿಯೂ ಆ ಬಳಿಕ ಪೊಲೀಸ್ ಮೂಲಗಳಿಗೆ ಸಿಗುತ್ತದೆ.ಸಂತ್ರಸ್ತ ಯುವತಿ ಸೇರಿದಂತೆ ಆರೋಪಿಗಳು ರಾಮಮೂರ್ತಿ ನಗರದ ಎನ್‌ಆರ್ ಐ ಲೇಔಟ್‌ನಲ್ಲಿ ವಾಸವಾಗಿದ್ದರು.

ಸಂತ್ರಸ್ತ ಯುವತಿಯನ್ನು ಆರೋಪಿಗಳು ಅತ್ಯಾಚಾರಗೈದು, ದೌರ್ಜನ್ಯ ವೆಸಗಿದ್ದಲ್ಲದೇ,ಈ ಎಲ್ಲಾ ಘಟನೆಯನ್ನು ಕಿರಾತಕರು ವಿಡಿಯೋ ಮಾಡಿದ್ದು, ಯುವತಿಯ ಮೇಲಿನ ದ್ವೇಷಕ್ಕಾಗಿ ಅತ್ಯಾಚಾರ ನಡೆಸಿದ್ದಾರೆ ಎನ್ನಲಾಗಿದೆ.

ಈ ಕುರಿತು ಪೂರ್ವ ವಿಭಾಗ ಡಿಸಿಪಿ ಡಾ.ಶರಣಪ್ಪ ಎಸ್.ಡಿ ಹೇಳಿ ನೀಡಿದ್ದು, ”’ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಆರೋಪಿಗಳನ್ನು ಸ್ಥಳ ಮಹಜರು ಮಾಡಲು ಕರೆತರಲಾಗಿತ್ತು. ಕರೆತಂದ ವೇಳೆ ಸಕ್ರಿ ಹಾಗೂ ಕ್ರೈಂ ಸ್ಟಾಫ್ ಮೇಲೆ ಹಲ್ಲೆಗೆ ಆರೋಪಿಗಳು ಮುಂದಾದದರು”.

ಕಲ್ಲು ತೂರಿ, ಪೊಲೀಸರ ಮೇಲೆ ಹಲ್ಲೆಗೆ ಪ್ರಯತ್ನಿಸಿದ್ದು, ಈ ವೇಳೆ ಇನ್ಸ್‌ಪೆಕ್ಟರ್ ಮೆಲ್ವಿನ್ ಪ್ರಾನ್ಸಿಸ್, ಪಿಎಸ್‌ಐ ಅರವಿಂದ್ ಅವರಿಂದ ಫೈರಿಂಗ್ ಮಾಡಲಾಗಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave A Reply

Your email address will not be published.