ಅಕ್ರಮವಾಗಿ ಜೂಜಾಡುತ್ತಿದ್ದ 22 ಮಂದಿಯ ಸೆರೆ

ಎರಡು ಪ್ರತ್ಯೇಕ ಪ್ರಕರಣದಲ್ಲಿ ಅಕ್ರಮವಾಗಿ ಜೂಜಾಡುತ್ತಿದ್ದ 22 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮಂಗಳೂರಿನ ಅಡ್ಯಾರ್‌ನಲ್ಲಿ 10 ಮಂದಿ ಮತ್ತು ದೇರೆಬೈಲ್‌ನಲ್ಲಿ‌ 12 ಮಂದಿಯನ್ನು ಬಂಧಿಸಲಾಗಿದೆ.

ಮಂಗಳೂರು ನಗರದ ಹೊರವಲಯದ ಅಡ್ಯಾರ್ ಸೋಮನಾಥ ಕಟ್ಟೆ ಬಳಿಯ ಲಾಡ್ಜೊಂದರಲ್ಲಿ ಜುಗಾರಿ ಆಟವಾಡುತ್ತಿದ್ದ 10 ಮಂದಿಯನ್ನು ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು ಶನಿವಾರ ರಾತ್ರಿ ಬಂಧಿಸಿದ್ದಾರೆ.

ಶ್ರೀಕಾಂತ ಶೆಟ್ಟಿ, ಅರುಣ ಬೆಳ್ಚಡ, ಚಂದ್ರಶೇಖರ, ರೋಹಿತ್ ಪೂಜಾರಿ, ಜಯಂತ್ ಗಾಣಿಗ, ಶರತ್, ರಾಹುಲ್, ನವೀನ್ ಎನ್, ಪ್ರೀತಮ್ , ಶೈಲೇಶ್ ಬಂಧಿತ ಆರೋಪಿಗಳು.

ಜೂ.26ರಂದು ರಾತ್ರಿ 8ಗಂಟೆಗೆ ವಾರಿಧಿ ಎಂಬ ಹೆಸರಿನ ಲಾಡ್ಜ್‌ನಲ್ಲಿ ಇಸ್ಪೀಟ್ ಎಲೆಗಳನ್ನು ಉಪಯೋಗಿಸಿಕೊಂಡು ಜುಗಾರಿ ಆಟವಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 9,500 ರೂ, 8 ಮೊಬೈಲ್ ಮತ್ತು 12,26,700 ರೂ.ವೌಲ್ಯದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನೊಂದು ಪ್ರಕರಣದಲ್ಲಿ ಮಂಗಳೂರಿನ ದೇರೆಬೈಲ್ ಚರ್ಚ್ ಹಿಂಬಾಗದಲ್ಲಿ ಜೂಜು ಆಟವಾಡುತ್ತಿದ್ದ ಸ್ಥಳಕ್ಕೆ ಕಾವೂರು ಪೊಲೀಸರು ದಾಳಿ ನಡೆಸಿ 12 ಮಂದಿಯನ್ನು ಶನಿವಾರ ಬಂಧಿಸಿದ್ದಾರೆ.

ಆರೋಪಿಗಳಿಂದ 7,200ರೂ. ನಗದು ಸಹಿತ ಒಟ್ಟು 8,700 ರೂ.ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

Leave A Reply

Your email address will not be published.