ಕೂಲ್ ಡ್ರಿಂಕ್ಸ್ ಬಾಟಲಿಯ ಮುಚ್ಚಳ ತೆರೆಯಲು ಎರಡು ಬುದ್ದಿವಂತ ಜೇನ್ನೊಣಗಳ ಪ್ರಯತ್ನ !
ಬ್ರೆಜಿಲ್ ದೇಶದಲ್ಲಿ ಅಚ್ಚರಿಯೊಂದು ನಡೆದಿದೆ. ಅಲ್ಲಿ
ಕೂಲ್‌ಡ್ರಿಂಕ್ಸ್ ಬಾಟಲಿಯ ಮುಚ್ಚಳವನ್ನು ತೆರೆಯಲು ಎರಡು ಜೇನ್ನೊಣಗಳು ಪ್ರಯತ್ನ ಪಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.
ಫಾಂಟ ಕೂಲ್ ಡ್ರಿಂಕ್ಸ್ ನ ಪ್ಲಾಸ್ಟಿಕ್ ಬಾಟಲಿಗೆ ಇರುವ ಬಿರಡೆ ತೆಗೆಯಲು ಆ ಎರಡು ಜೇನು ನೊಣಗಳು ಪ್ರಯತ್ನಿಸುತ್ತಿರುವ ವಿಡಿಯೋ ಅದಾಗಿದೆ. ಬಾಟಲ್ ಮುಚ್ಚಳದ ವಿರುದ್ಧ ದಿಕ್ಕಿನಲ್ಲಿ ಆ ಎರಡು ಜೇನ್ನೊಣಗಳು ಕುಳಿತು ತಮ್ಮ ಎರಡೂ ಕೈಗಳನ್ನು ಬಳಸಿ ಮುಚ್ಚಳವನ್ನು ಎರಡೂ ಕಡೆಯಿಂದ ತೆರೆಯಲು ಅವು ಪ್ರಯತ್ನ ಮಾಡುತ್ತಿವೆ. ಬಾಟಲಿಯ ಎರಡೂ ಬದಿಯಲ್ಲೂ ಒಂದೊಂದು ಜೇನು ನೊಣ ಕುಳಿತುಕೊಂಡು, ಮುಚ್ಚಳ ತೆರೆಯಲು ಸರ್ಕಸ್ ಮಾಡುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ.
ಫಾಂಟ ಪೇಯ ದ ಸಕ್ಕರೆಯ ಸ್ವಾದ ಹೀರಲು ಪಾಡು ಪಡುತ್ತಿರುವ ಅವುಗಳ ಪ್ರಯತ್ನಕ್ಕೆ ಯಶಸ್ಸು ಸಿಕ್ಕೀತೇ, ಇಲ್ಲವೇ ಎಂಬುದನ್ನು ನೋಡಲು ನೀವು ಈ ವಿಡಿಯೋ ನೋಡಲೇ ಬೇಕು.
‘ಮನುಷ್ಯ ಇಷ್ಟು ದೂರ ನಡೆದು ಇಷ್ಟೆಲ್ಲಾ ಕಲಿತಿದ್ದಾನೆ. ಇನ್ನು ಮನುಷ್ಯರ ಕಥೆ ಮುಗಿಯಿತು. ಜೇನುಹುಳುಗಳು ಬಾಟಲ್ ನ ಸ್ಕ್ರೂ ತಿರುಗಿಸಿ ಮುಚ್ಚಳ ತೆರೆಯ ಬಲ್ಲರಾದರೆ,ಇದು ನಮ್ಮ ಕೊನೆಯ ಪ್ರಾರಂಭ ” ಎಂಬರ್ಥದಲ್ಲಿ ಆ ದೃಶ್ಯವನ್ನು ಟ್ವೀಟ್ ಮಾಡಿದವರು ಬರೆದಿದ್ದಾರೆ.