ವಿಜಯನಗರ | ಇಂದು ಜನಿಸಿದ ಶಿಶು ಒಂದರ ಕಾಲಲ್ಲಿ ಇತ್ತು ಐದಲ್ಲ ಒಂಬತ್ತು ಬೆರಳುಗಳು?!!
ಐದಕ್ಕಿಂತ ಒಂದು ಅಥವಾ ಎರಡು ಹೆಚ್ಚು ಬೆರಳಿರುವ ಮಕ್ಕಳ ಜನನವಾಗಿರುವುದು ತಿಳಿದ ಸಂಗತಿ. ಆದರೆ ಒಂಬತ್ತು ಬೆರಳಿರುವ ಮಗು ಜನಿಸುವುದೆಂದರೆ ನಿಜಕ್ಕೂ ಆಶ್ಚರ್ಯವೇ ಸರಿ!
ಇಂತಹದೊಂದು ಅಚ್ಚರಿಗೆ ಹೊಸಪೇಟೆ ತಾಲೂಕಿನ ಸರ್ಕಾರಿ ಆಸ್ಪತ್ರೆ ಸಾಕ್ಷಿಯಾಗಿದೆ. ಎಡಗಾಲಿಗೆ 9 ಬೆರಳು ಹೊಂದಿರುವ ಇರುವ ಅಪರೂಪದ ಮಗುವಿನ ಜನನವಾಗಿದೆ.
ವಿಜಯನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಒಂಬತ್ತು ಬೆರಳು ಇರುವ ಮಗುವಿನ ಜನನವಾಗಿದೆ ಎಂದು ಸರ್ಕಾರಿ ಆಸ್ಪತ್ರೆ ತಜ್ಞ ಡಾ. ಬಾಲಚಂದ್ರ ತಿಳಿಸಿದ್ದಾರೆ.
ಇಂದು ಮಧ್ಯಾಹ್ನ ಜನಿಸಿದ ಮಗುವಿನ ಕಾಲಿನಲ್ಲಿ ಒಂಬತ್ತು ಬೆರಳು ಇರುವುದನ್ನು ಕಂಡು ಹೆರಿಗೆ ಮಾಡಿದ ವೈದ್ಯರಿಗೆ ಅಚ್ಚರಿಯಾದ್ದಂತು ನಿಜ. ಇಂತಹ ಹಲವು ಅಚ್ಚರಿಗಳಿಗೆ ಪ್ರಕೃತಿ ಸಾಕ್ಷಿ ಆಗುವುದಂತೂ ಸಹಜವೇ ಸರಿ.