ಬ್ರದರ್ ಸಿಸ್ಟರ್ ಇನ್ ಡೀಪ್ ಲವ್ | ಬ್ರದರ್ಸ್ ಡೇ ಗೆ ದಿನಗಳು ಬಾಕಿ ಇರುವಾಗ ಆದದ್ದೇನು ಗೊತ್ತೇ ??

ಪ್ರೀತಿಯಲ್ಲಿ ಬಿದ್ದ ಅಣ್ಣ ಮತ್ತು ತಂಗಿ ಆತ್ಮಹತ್ಯೆಯ ದಾರಿ ತುಳಿದ ಘಟನೆಯೊಂದು ನಡೆದಿದೆ.

 

18 ವರ್ಷದ ಯುವಕ ಮತ್ತು 16 ವರ್ಷದ ಹುಡುಗಿ ಈ ರೀತಿ ಪ್ರೀತಿಯಲ್ಲಿ ಬಿದ್ದವರು.

ಈ ಇಬ್ಬರು ಸಂಬಂಧದಲ್ಲಿ ಅಣ್ಣ- ತಂಗಿ ಆಗಬೇಕು. ಚಿಕ್ಕಪ್ಪ ಚಿಕ್ಕಮ್ಮನ ಮಕ್ಕಳಂತೆ. ಆದರೆ ಇವರಿಬ್ಬರ ತಮ್ಮ ಒಡನಾಟದ ಸಂದರ್ಭ ಪ್ರೀತಿ ಹುಟ್ಟಿದೆ. ಸ್ವಲ್ಪ ಸಮಯ ಅದು ಮನೆಯವರಿಗೆ ತಿಳಿದಿದೆ. ಆಗ ಅವರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಅದು ಬಿಹಾರದ ಬಂಕಾ ಜಿಲ್ಲೆ. ಅಲ್ಲಿ ನಡೆದ ಅಣ್ಣ- ತಂಗಿ ನಡುವೆ ಸಂಬಂಧ ಇರುವ ಸುದ್ದಿ ಅರಿತ ಕುಟುಂಬಸ್ಥರು ಆ ಯುವಕನನ್ನು ಕೋಲ್ಕತ್ತಾಗೆ ಕಳುಹಿಸಿದ್ದಾರೆ.
ಹಾಗಾದರೂ ಈ ಪ್ರೀತಿ ನಿಂತುಹೋಗಲಿ ಎಂಬುದು ಮನೆಯವರ ಆಶಯ. ಆದರೆ ಒಂದು ದಿನ ಸಂಬಂಧಿಕರ ಮದುವೆಯ ನಿಮಿತ್ತ ಹುಡುಗಿಯ ಕುಟುಂಬಸ್ಥರು ಆಕೆ ಒಬ್ಬಳನ್ನೇ ಮನೆಯಲ್ಲಿ ಬಿಟ್ಟು ಮದುವೆಗೆ ಹೋಗಿದ್ದರು. ಈ ಸಂದರ್ಭ ಹುಡುಗಿ ಹುಡುಗನಿಗೆ ಕರೆ ಮಾಡಿ ತಾನೊಬ್ಬಳೇ ಇರುವ ವಿಚಾರ ತಿಳಿಸಿದ್ದಾನೆ. ಹಾಗೆ ಮನೆಯಲ್ಲಿ ಹುಡುಗಿ ಮಾತ್ರ ಇರುವ ವಿಚಾರ ತಿಳಿದ ಯುವಕ ನೇರವಾಗಿ ಆಕೆಯ ಮನೆಗೆ ಬಂದಿದ್ದಾನೆ.

ಹೀಗೆ ಬಂದವನೇ ಹುಡುಗಿಯ ಜತೆ ಮಾತಾಡಿ ಇಬ್ಬರೂ ಹೊರಗಡೆ ಹೋಗಿದ್ದಾರೆ. ಆ ನಂತರ ಅವರಿಬ್ಬರನ್ನು ಯಾರೂ ಜೀವಂತ ನೋಡಿಲ್ಲ. ಅವರಿಬ್ಬರೂ ಅಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಆತ್ಮಹತ್ಯೆಗೂ ಮುನ್ನ ಪತ್ರ ಅವರಿಬ್ಬರೂ ಕೂತು ತಾಳ್ಮೆಯಿಂದ ಬರೆದಿದ್ದು, ಈ ಪತ್ರದ ಆಶಯ ಅವರ ಎಲ್ಲ ಕುಟುಂಬ ಸದಸ್ಯರನ್ನು ಮೂಕರನ್ನಾಗಿ ಮಾಡಿದೆ. ‘ನಾವು ಈ ಜನ್ಮದಲ್ಲಿ ಅಣ್ಣ-ತಂಗಿಯಾಗಿದ್ದೇವೆ. ಆದರೆ ಮುಂದಿನ ಜನ್ಮದಲ್ಲಿ ನಾವು ಪ್ರೇಮಿಗಳಾಗಿ ಹುಟ್ಟುತ್ತೇವೆ’ ಎಂದು ಹುಡುಗ ಬರೆದಿಟ್ಟಿದ್ದಾನೆ.

ಸದ್ಯ ಘಟನೆ ಸಂಬಂಧ ಹುಡುಗ ಮತ್ತು ಹುಡುಗಿಯ ಕುಟುಂಬಸ್ಥರು ಪರಸ್ಪರ ದೂರು ದಾಖಲು ಮಾಡುವ ಸ್ಥಿತಿಯಲ್ಲಿ ಇಲ್ಲ. ಯಾರಿಗೂ ಏನೂ ಮಾಡಲು ತೋಚಿಲ್ಲ. ಬದಲಿಗೆ, ಜೀವನದ ನಿಜ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವ ಪ್ರಬುದ್ಧತೆ ಇಲ್ಲದ ಕಾರಣ ಮಕ್ಕಳು ದುಡುಕಿನ ನಿರ್ಧಾರ ಕೈಗೊಂಡಿದ್ದಾರೆ ಎಂದು ಕುಟುಂಬದವರು ಗೊಣಗಿಕೊಂಡು ನಿಟ್ಟುಸಿರು ಬಿಟ್ಟಿದ್ದಾರೆ.

Leave A Reply

Your email address will not be published.