ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಸಾಮಾಜಿಕ ಜಾಲತಾಣ ಪ್ರಕೋಷ್ಠ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಕಿಟ್ ವಿತರಣೆಗೆ ಚಾಲನೆ
ಮಂಗಳೂರು .ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಸಾಮಾಜಿಕ ಜಾಲತಾಣ ಪ್ರಕೋಷ್ಠ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಅಗತ್ಯ ಇರುವ ವೈದ್ಯಕೀಯ ಬಳಕೆಗೆ ಬೇಕಾಗಿರುವ ಸಾಮಗ್ರಿಗಳಾದ
ಸರ್ಜಿಕಲ್ ಗ್ಲೌಸ್, ಮಾಸ್ಕ್,
ಜಿಂಕ್ ವಿಟಮಿ ನ್ “C”ಮಾತ್ರೆಗಳನ್ನು ಒದಗಿಸುವ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ಸುದರ್ಶನ್ ಎಂ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಹಾಪೌರರಾದ ಪ್ರೇಮಾನಂದ್ ಶೆಟ್ಟಿ ,ಕರ್ನಾಟಕ ಮೀನುಗಾರಿಕಾ ನಿಗಮದ ಅಧ್ಯಕ್ಷರಾದ ಶ್ರೀ ನಿತಿನ್ ಕುಮಾರ್,ಜಿಲ್ಲಾ ಸಾಮಾಜಿಕ ಜಾಲತಾಣ ಪ್ರಕೋಷ್ಠ ಸದಸ್ಯರಾದ ಅಕ್ಷಯ್ ಆಳ್ವ, ಮಂಗಳೂರು ನಗರ ದಕ್ಷಿಣ ಸಾಮಾಜಿಕ ಜಾಲತಾಣ ಪ್ರಕೋಷ್ಠ ಸಂಚಾಲಕರಾದ ನಿಲೇಶ್ ಕಾಮತ್ ಮತ್ತು ಸಹಸಂಚಾಲಕರಾದ ಅಶ್ವಿತ್ ಕೊಟ್ಟಾರಿ ಉಪಸ್ಥಿತರಿದ್ದರು.