ಗ್ಯಾಸ್ ಟ್ಯಾಂಕರ್ – ಅಂಬುಲೆನ್ಸ್ ಮುಖಾಮುಖಿ, ರೋಗಿ ಮೃತ್ಯು
ಉತ್ತರಕನ್ನಡ : ಗ್ಯಾಸ್ ಟ್ಯಾಂಕರ್ ಮತ್ತು ಅಂಬುಲೆನ್ಸ್ ನಡುವೆ ನಡೆದ ಅಪಘಾತದಲ್ಲಿ ರೋಗಿ ಮೃತಪಟ್ಟು ಅಂಬುಲೆನ್ಸ್ ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ರಾಮತೀರ್ಥ ಕ್ರಾಸ್ ಬಳಿ ಗುರುವಾರ ಸಂಜೆ ನಡೆದಿದೆ.
ಮೃತ ವ್ಯಕ್ತಿಯನ್ನು ರಾಮಕೃಷ್ಣ ಗಣಪತಿ ಪ್ರಸಾದ (70) ಎಂದು ಗುರುತಿಸಲಾಗಿದೆ.
ಗಂಭೀರ ಗಾಯಗೊಂಡ ಅಂಬುಲೆನ್ಸ್ ಚಾಲಕ ಜಾನು ದತ್ತ ನಾಯ್ಕ ಎಂಬವರನ್ನು ಹೆಚ್ಚಿನ ಚಿಕಿತ್ಸೆಗೆ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗೋಕರ್ಣದ ರೋಗಿಯೊಬ್ಬರನ್ನು ಕರೆದುಕೊಂಡು ಮಣಿಪಾಲಕ್ಕೆ ಹೋಗುವ ಸಂದರ್ಭದಲ್ಲಿ ಮಂಗಳೂರಿನಿಂದ ಕುಮಟಾ ಕಡೆಗೆ ಹೋಗುತ್ತಿದ್ದ ಟ್ಯಾಂಕರ್ವೊಂದು ಮುಖಾಮುಖಿ ಢಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ ಹೊನ್ನಾವರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.