ರೈತರು ಮತ್ತು ಸ್ವಸಹಾಯ ಸಂಘದ ಸಾಲದ 3 ತಿಂಗಳ ಬಡ್ಡಿಯೂ ಮನ್ನಾ
ರೈತರು ಮತ್ತು ಸ್ವಸಹಾಯ ಸಂಘದ ಸಾಲ ಮರುಪಾವತಿಯನ್ನು ಮೂರು ತಿಂಗಳು ಮಾಡಲಾಗಿರುವುದು ಎಲ್ಲರಿಗೂ ತಿಳಿದ ವಿಷಯ.
ಇದೀಗ ಗೊತ್ತಾದ ವಿಷಯ ಏನೆಂದರೆ ಸರ್ಕಾರವು ಈ ಅವಧಿಯ ಸಾಲದ ಬಡ್ಡಿಯನ್ನು ತಾನೇ ಭರಿಸಲಿದೆ.
ರೈತರು ಮತ್ತು ಸ್ವಸಹಾಯ ಸಂಘಗಳವರು ಪ್ರಾಥಮಿಕ ಬ್ಯಾಂಕುಗಳಿಂದ ಪಡೆದಿರುವ ಕೃಷಿ ಪತ್ತಿನ ಸಹಕಾರ ಸಂಘ, ಭೂ ಅಭಿವೃದ್ಧಿ ಬ್ಯಾಂಕುಗಳಿಂದ ಪಡೆದ ಎಲ್ಲಾ ರೀತಿಯ ಸಾಲ ಮರುಪಾವತಿ ವಿಸ್ತರಣೆ ಮಾಡಲಾಗಿದೆ. ಅಲ್ಲದೆ ಎಲ್ಲಾ ಬ್ಯಾಂಕುಗಳ ಮುಂದಿನ ಮೂರು ತಿಂಗಳ ಬಡ್ಡಿಯನ್ನು ಸರ್ಕಾರವೇ ಭರಿಸಲಿದೆ. ಇದು ಮೇ ತಿಂಗಳಿನಿಂದ ಕಂತುಗಳನ್ನು ಒಳಗೊಂಡು ಬರುವ ಜುಲೈವರೆಗೆ ಪಾವತಿಸಬೇಕಾಗಿರುವ ಕಂತುಗಳ ತನಕ ವಿಸ್ತರಿಸಲಾಗಿದೆ.