ಆ 18 ರ ನಿಗಿನಿಗಿ ಯೌವನದ ಹುಡುಗನ ಡ್ರೀಮ್ ಗರ್ಲ್ ನ ವಯಸ್ಸು ಕೇವಲ 71 ವರ್ಷ | ಅವರಿಬ್ಬರ ಉತ್ಕಟ ಪ್ರೀತಿಯ ಕಥೆ ಗೊತ್ತಾ ?

ಪ್ರೀತಿ ಕುರುಡು ಎಂಬ ಮಾತಿದೆ. ಪ್ರೀತಿ ಜಾತಿ, ವಯಸ್ಸಿನ ಗಡಿ ಮೀರಿದ್ದು. ಇತ್ತೀಚೆಗೆ ಇಂತಹ ಮಾತುಗಳಿಗೆ ಪುಷ್ಠಿ ನೀಡುವಂತೆ ಹಲವು ಪ್ರಸಂಗಗಳು ನಡೆಯುತ್ತಿವೆ. ಇದಕ್ಕೆ ಈ ದಂಪತಿ ಉತ್ತಮ ನಿದರ್ಶನವಾಗಿದ್ದಾರೆ. ಆತ ತನಗಿಂತ 53 ವರ್ಷ ದೊಡ್ಡವಳನ್ನು ಪ್ರೀತಿಸಿದ್ದಾನೆ. ಅಷ್ಟೇ ಅಲ್ಲ, ಆಕೆಗೆ ಈಗ ಕೇವಲ 71 ವರ್ಷ ವಯಸ್ಸು !

 

ಅದು ಆರು ವರ್ಷಗಳ ಹಿಂದೆ ಭೇಟಿಯಾಗಿದ್ದ ದಿಲ್ ವಾಲೇ ಮತ್ತು ದುಲ್ಹನಿಯ. ಆ ಪ್ರೀತಿ ಹುಟ್ಟಿದ್ದು 2015 ರಲ್ಲಿ. 18 ವರ್ಷದ ಆ ಯುವಕನಿಗೆ ಅದೆಗೋ ಮಾಯೆಯಲ್ಲಿ ಆ 71 ವರ್ಷದ ವೃದ್ಧೆ ಮೇಲೆ ಪ್ರೀತಿ ಹುಟ್ಟಿತ್ತು. 18 ವರ್ಷದ ಗ್ಯಾರಿ ಹಾರ್ಡ್‌ವಿಕ್ ತನ್ನ ಚಿಕ್ಕಮ್ಮ ಲಿಜಾ ಅಂತ್ಯಕ್ರಿಯೆಗೆ ಹೋಗಿದ್ದ. ಈ ವೇಳೆ ಆತನ ಭಾವಿ ಪತ್ನಿ ಅಡಾ ಸಿಕ್ಕಿದ್ದಾಳೆ. ಆ ಸಮಯದಲ್ಲಿ ಅಡಾಗೆ 71 ವರ್ಷವಾಗಿತ್ತು. ಆಗಾಗಲೇ ಮಗನನ್ನು ಅಡಾ ಕಳೆದುಕೊಂಡಿದ್ದಳು. ಒಂದೇ ನೋಟದಲ್ಲಿ ಪ್ರೀತಿಗೆ ಬಿದ್ದಿದ್ದ ಜೋಡಿ ಹುಚ್ಚರಂತೆ ಉತ್ಕಟವಾಗಿ ಪ್ರೀತಿಸಲು ಶುರು ಮಾಡಿದ್ದರು.

ಎರಡು ವಾರಗಳ ನಂತರ ಇಬ್ಬರು ಕೂಡಾ ಒಬ್ಬರನ್ನೊಬ್ಬರು ಬಿಟ್ಟಿರಲಾರದಂತೆ ಆಗಿದ್ದರು. ಅದಕ್ಕಾಗೇ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದರು. ಮದುವೆ ನಂತರ ಅಡಾ ತನ್ನ ಮೊಮ್ಮಗನ ಮನೆಯಲ್ಲಿ ಗಂಡನ ಜೊತೆ ವಾಸವಾಗಿದ್ದಾಳೆ. ಸೋಜಿಗದ ಸಂಗತಿಯೆಂದರೆ ಆಕೆಯ ಮೊಮ್ಮಗ ಆಕೆಯ ಪತಿಗಿಂತ ಮೂರು ವರ್ಷ ದೊಡ್ಡವನು !

ಇದೀಗ ಮದುವೆಯಾಗಿ ಆರು ವರ್ಷ ಕಳೆದಿದೆ. ಇಬ್ಬರ ಮಧ್ಯೆ ಅದೇ ಗಾಢ ಪ್ರೀತಿ ಉಳಿದಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಜೋಡಿಯನ್ನು ಜನರು ಬಹಳ ಇಷ್ಟಪಡುತ್ತಿದ್ದಾರೆ. ಇತ್ತೀಚಿಗೆ ಆ ಜೋಡಿ ತಮ್ಮ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿತ್ತು. ಆ ಫೋಟೋಕ್ಕೆ ಲಕ್ಷಾಂತರ ಲೈಕ್ ಸಿಕ್ಕಿದೆ. ವಯಸ್ಸಿನ ಅಂತರ ಅವರ ಮನಸ್ಸನ್ನು ಅವಲಂಭಿಸಿರುತ್ತದೆ ಎಂದು ಅವರು ಹೇಳಿದ್ದಾರೆ. ಪ್ರೀತಿ ಚಿರಾಯು !

Leave A Reply

Your email address will not be published.