Breaking News | 1250 ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ | ಲಾಕ್ಡೌನ್ ನಿರ್ಧಾರ ಮೇ 23ರಂದು
ಕೋವಿಡ್ ಎರಡನೇ ಅಲೆಯಲ್ಲಿ ನೊಂದ ಕುಟುಂಬಗಳಿಗೆ ಸರ್ಕಾರ ಘೋಷಣೆ ಮಾಡಿದೆ ಪ್ಯಾಕೇಜ್. ರಾಜ್ಯದಲ್ಲಿ ಹಣಕಾಸಿನ ಪರಿಸ್ಥಿತಿಯ ಅನುಕೂಲವಾಗಿಲ್ಲದಿದ್ದರೂ ಕೂಡ ಸರಕಾರ ವಿಶೇಷ ಪ್ಯಾಕೇಜ್ ಗೆ ಮುಂದಾಗಿದೆ.
ಲಾಕ್ಡೌನ್ ವಿಸ್ತರಣೆಯ ನಿರ್ಧಾರವನ್ನು ಮೇ ತಿಂಗಳ 23 ರಂದು ತಿಳಿಸಲಾಗುವುದು.
1250 ಕೋಟಿ ವಿಶೇಷ ಪ್ಯಾಕೇಜ್ ಘೋಷಣೆೆ ಮಾಡಿದ ಕರ್ನಾಟಕ ಸರಕಾರ. ಒಟ್ಟು 30 ಲಕ್ಷಕ್ಕೂ ಅಧಿಕ ಮಂದಿ ಈ ಪ್ಯಾಕೇಜ್ ಫಲಾನುಭವಿಗಳಾಗಲಿದ್ದಾರೆ.
ಹೂವು ಬೆಳೆಗಾರರಿಗೆ ಪ್ರತಿ ಹೆಕ್ಟೇರಿಗೆ rs.30000 ಘೋಷಣೆ. ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ಹೆಕ್ಟೇರಿಗೆ 10000 ಪರಿಹಾರ.
ಆಟೋ ಚಾಲಕರಿಗೆ 3000 ರೂಪಾಯಿ ಸಹಾಯ
ಸಹಕಾರ ಸಂಘಗಳ ಲೋನ್ ಮರು ಪಾವತಿಯನ್ನು 3 ತಿಂಗಳು ಮುಂದೂಡಿಕೆ
ಗ್ರಾಮ ಪಂಚಾಯಿತಿಗಳಲ್ಲಿ ಉಚಿತ ಊಟದ ವ್ಯವಸ್ಥೆ
ಕಟ್ಟಡ ಕಾರ್ಮಿಕರಿಗೆ ತಲಾ 3000 ರೂಪಾಯಿ ಪ್ಯಾಕೇಜ್
ಅಸಂಘಟಿತ ಕಾರ್ಮಿಕರಿಗೆ ತಲಾ ಎರಡು ಸಾವಿರದ ಪ್ಯಾಕೇಜ್್- ಚಮ್ಮಾರ ಕಂಬಾರ ಮಡಿವಾಳ ಫಿಟ್ಟರ್ ಮುಂತಾದವರಿಗೆ ತಲಾ ₹2000 ಘೋಷಣೆ
ರಸ್ತೆ ಬದಿ ವ್ಯಾಪಾರಿಗಳಿಗೆ 2000 ರೂಪಾಯಿ ಪ್ಯಾಕೇಜ್ ಘೋಷಣೆ
ಕಲಾವಿದರು ಮತ್ತು ಕಲಾತಂಡಗಳಿಗೆ ತಲಾ ಮೂರು ಸಾವಿರ ರೂಪಾಯಿ ಘೋಷಣೆ
ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿರುವ ಜನರಿಗೆ ಪಡಿತರ ಚೀಟಿಯನ್ನು ವಿತರಿಸದೇ ಇದ್ದಲ್ಲಿ ಅಂತಹವರಿಗೂ ಸಹ ಮೇ ಮತ್ತು ಜೂನ್ ತಿಂಗಳಿಗೆ ಪ್ರತಿ ಬಿ.ಪಿ.ಎಲ್. ಅರ್ಜಿದಾರರಿಗೆ ಉಚಿತವಾಗಿ 10 ಕೆ.ಜಿ. ಆಹಾರಧಾನ್ಯ ಹಾಗೂ ಎ.ಪಿ.ಎಲ್. ಅರ್ಜಿದಾರರಿಗೆ ಪ್ರತಿ ಕೆ.ಜಿ.ಗೆ 15 ರೂಪಾಯಿಗಳಂತೆ 10 ಕೆ.ಜಿ. ಆಹಾರಧಾನ್ಯವನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ. ಇದರಿಂದ ಒಟ್ಟು 3.10 ಲಕ್ಷ ಅರ್ಜಿದಾರರಿಗೆ ಸಹಾಯವಾಗಲಿದ್ದು, ಇದರಿಂದ ಒಟ್ಟು 3,07 ಲಕ್ಷ ಬಿಪಿಎಲ್‌ದಾರರು ಹಾಗೂ 2436 ಎ.ಪಿ.ಎಲ್‌ದಾರರಿಗೆ ಸಹಾಯವಾಗಲಿದೆ. ಇದಕ್ಕಾಗಿ 24 ಕೋಟಿ ನಿಯೋಜಿಸಲಾಗಿದೆ.
ಶಿಕ್ಷಕರು ಸಿಲಿಂಡರ್ ಡೆಲಿವರಿ ಬಾಯ್ಸ್ ಮತ್ತು ಲೈನ್ ವರ್ಕರ್ ಗಳೆಂದು ಘೋಷಣೆ. ಇವರಿಗೆ ಆದ್ಯತೆಯ ಮೇಲೆ ಲಸಿಕೆ ನೀಡಲಾಗುವುದು.
ನಗರ ಪ್ರದೇಶಗಳ ಕಾರ್ಮಿಕರು ಮತ್ತು ಬಡವರು ಆಹಾರವಿಲ್ಲದೆ ಬಳಲಬಾರದು ಎಂದು ಇಂದಿರಾ ಕ್ಯಾಂಟೀನ್ ಮೂಲಕ ಸರ್ಕಾರ ಉಚಿತವಾಗಿ ಊಟದ ವ್ಯವಸ್ಥೆ ಮಾಡಿದ್ದು ನಗರ ಪ್ರದೇಶಗಳಲ್ಲಿ 6 ಲಕ್ಷಕ್ಕೂ ಅಧಿಕ ಫಲಾನುಭವಿಗಳಿಗೆ ಸಹಾಯವಾಗುತ್ತಿದೆ.ಸುಮಾರು 25 ಕೋಟಿ ರೂ ಖರ್ಚಾಗುತ್ತದೆ.
ಕೋವಿಡ್ ನಿರ್ವಹಣೆಗಾಗಿ ಪ್ರತಿ ಗ್ರಾಮಪಂಚಾಯತಿಗೆ 50,000 ರೂಪಾಯಿ ಇವಿಷ್ಟು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಘೋಷಿಸಿದ ಪ್ಯಾಕೇಜ್ ನ ಪ್ರಮುಖ ಅಂಶಗಳು.