ಮಂಗಳೂರಿನಲ್ಲಿ ನಿಂತಿದ್ದ ಬಸ್ಸಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು, ಪ್ರಕರಣ ದಾಖಲು
ಮಂಗಳೂರು ಪಟ್ಟಣದಲ್ಲಿ ಲಾಕ್ ಡೌನ್ ಹಿನ್ನೆಲೆಯಲ್ಲಿ ರಸ್ತೆ ಬದಿ ನಿಲ್ಲಿಸಿದ್ದ ಖಾಸಗಿ ಬಸ್ ಒಂದು ಬೆಂಕಿಗೆ ಆಹುತಿಯಾದ ಘಟನೆ ನಡೆದಿದೆ.
ಮಂಗಳೂರಿನ ಮಂಗಳಾದೇವಿ ದೇವಸ್ಥಾನದ ಎದುರುಗಡೆ ಇಂದು ಮುಂಜಾನೆ ಎರಡು ಗಂಟೆ ಸುಮಾರಿಗೆ ಬೆಂಕಿ ತಗಲಿದೆ ಎನ್ನಲಾಗಿದೆ. ಬೆಂಕಿಗೆ ಬಸ್ ಬಹುತೇಕ ಸುಟ್ಟು ಹೋಗಿದೆ.
ಅಕ್ಕಪಕ್ಕದಲ್ಲಿ ಬೇರೆ ಕೆಲವು ಬಸ್ ಗಳು ಕೂಡ ಇದ್ದರೂ ಅವುಗಳಿಗೆ ಯಾವುದೇ ಹಾನಿಯಾಗಿಲ್ಲ.
ಲಾಕ್ ಡೌನ್ ಹಿನ್ನೆಲೆಯಲ್ಲಿ ಈ ಬಸ್ ಗಳನ್ನೆಲ್ಲಾ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿತ್ತು. ಯಾರೋ ಕಿಡಿಗೇಡಿಗಳ ಕೃತ್ಯ ಆಗಿರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಘಟನೆ ಬಗ್ಗೆ ಪಾಂಡೇಶ್ವರ ಠಾಣೆಗೆ ದೂರು ನೀಡಲಾಗಿದ್ದು ಪೊಲೀಸರು ಆಗಮಿಸಿ ತನಿಖೆ ನಡೆಸಿದ್ದಾರೆ.
ಶಾರ್ಟ್ ಸರ್ಕಿಟ್ ನಿಂದ ಬೆಂಕಿ ಹತ್ತಿಕೊಳ್ಳುವ ಸಾಧ್ಯತೆ ಇಲ್ಲ. 15-20 ದಿನಗಳಿಂದ ಒಂದೇ ಕಡೆ ನಿಂತಿದ್ದರೆ ಬಸ್ಸಿನ ಬ್ಯಾಟರಿ ವೀಕ್ ಆಗಿರತ್ತೆ, ಪವರ್ ಇಲ್ಲದೆ ಶಾರ್ಟ್ ಸರ್ಕಿಟ್ ಆಗಲಿಕ್ಕಿಲ್ಲ. ಇದು ಯಾರೋ ರಾತ್ರಿ ಬಸ್ಸಿನಲ್ಲಿ ಒಳಗೆ ಬಂದು ಕುಳಿತವರ ಕೃತ್ಯ ಆಗಿರುವ ಸಾಧ್ಯತೆಯಿದೆ. ಇಲ್ಲದಿದ್ದರೆ ಉದ್ದೇಶಪೂರ್ವಕ ಯಾರೋ ಕೃತ್ಯ ನಡೆಸಿದ್ದಾರೆ ಎನ್ನಲಾಗಿದೆ.