ಕೋವಿಡ್ ಆಸ್ಪತ್ರೆಯಲ್ಲಿ ನೆಲ ಒರೆಸಿ ಶುಚಿಗೊಳಿಸಿದ ಇಂಧನ ಸಚಿವ
ಮಿಜೋರಾಂನ ಇಂಧನ ಸಚಿವರೊಬ್ಬರು ತಮ್ಮ ಹೆಂಡತಿ ಮತ್ತು ಮಗನೊಂದಿಗೆ COVID-19 ಗೆ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯಲ್ಲಿ ನೆಲವನ್ನು ಒರೆಸಿ ಸುದ್ದಿಯಾಗಿದ್ದಾರೆ.
ಮಿಜೋರಾಂನ ವಿದ್ಯುತ್ ಇಲಾಖೆ ಸಚಿವ ಆರ್ ಲಾಲ್ಟಿರ್ಲಿಯಾನಾ ಅವರು ನೆಲ ಒರಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಆತ ನೆಲವನ್ನು ಒರೆಸುವ ಮೂಲಕ ರಾಜ್ಯದಲ್ಲಷ್ಟೆ ಅಲ್ಲ, ಈಗ ದೇಶದಾದ್ಯಂತ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ಆಯಾಗಳು ಗಾದೆಗಳು ಮತ್ತು ವೈದ್ಯಕೀಯ ಸಿಬ್ಬಂದಿಗಳನ್ನು ಹುರಿದುಂಬಿಸಿದ್ದಾರೆ.
ನೆಲವನ್ನು ಕ್ಲೀನ್ ಮಾಡುವುದು ಅವರು ಮೊದಲ ಬಾರಿಗೆ ಮಾಡಿದ ಕೆಲಸವಲ್ಲ ಎಂದು ಲಾಲ್ಡಿರ್ಲಿಯಾನಾ ಹೇಳಿದ್ದಾರೆ. ಅವರು ತಮ್ಮ ಮನೆ ಮತ್ತು ಇತರ ಸ್ಥಳಗಳಲ್ಲಿಯೂ ಇದನ್ನು ಮಾಡುತ್ತಾರಂತೆ. ಮಿಜೋರಾಂ ರಾಜ್ಯದ ಈ ಸಚಿವರು ಹೆಚ್ಚು ಕಮ್ಮಿ ಸಾಮಾನ್ಯ ವ್ಯಕ್ತಿಯಾಗಿ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ. ತಮ್ಮಮನೆ ಕೆಲಸಗಳನ್ನು ತಾವೇ ಮಾಡುತ್ತಾರೆ. ಸಾರ್ವಜನಿಕ ಸಾರಿಗೆ ಅಥವಾ ಮೋಟಾರು ಬೈಕಿನಲ್ಲಿ ಪ್ರಯಾಣಿಸುತ್ತಾರೆ ಎಂದು ತಿಳಿದು ಬಂದಿದೆ.
ಅಲ್ಲದೆ ಆತ ತಮ್ಮ ಊರಿನ ಸಮುದಾಯ ಕಾರ್ಯಗಳಲ್ಲಿ ಭಾಗವಹಿಸುತ್ತಾರೆ ಮತ್ತು ಹಬ್ಬದ ಸಮಯದಲ್ಲಿ ಊರ ಮಂದಿಯ ಮನೆಗಳಿಗೆ ಹೋಗಿ ಅಡುಗೆಯವರಾಗಿ ಕೂಡ ಸಹಾಯ ಮಾಡುತ್ತಾರಂತೆ.
ಆಸ್ಪತ್ರೆಯಲ್ಲಿ ಕ್ಲೀನ್ ಮಾಡುವ ನನ್ನ ಉದ್ದೇಶ ದಾದಿಯರು ಅಥವಾ ವೈದ್ಯರನ್ನು ಮುಜುಗರಕ್ಕೀಡುಮಾಡುವುದಕ್ಕಲ್ಲ. ಬದಲಾಗಿ, ‘ವಾಕ್ ದ ಟಾಕ್ ‘ ಉದಾಹರಣೆಯಾಗಿ ಇತರರನ್ನು ಮುನ್ನಡೆಸಲು ನಾನು ಬಯಸುತ್ತೇನೆ ಎಂದು ಸಚಿವ ಲಾರ್ಲಿಯಾನಾ ಹೇಳಿದ್ದಾರೆ.