ವ್ಯಕ್ತಿ ಆತ್ಮಹತ್ಯೆಗೈದು 2 ತಿಂಗಳ ಬಳಿಕ ಪ್ರಕರಣ ಬೆಳಕಿಗೆ

 

ಮೂಡುಬಿದಿರೆ: ವಿವಾಹಿತ ವ್ಯಕ್ತಿಯೋರ್ವ 2 ತಿಂಗಳ ಹಿಂದೆ ತನ್ನ ಮನೆಯೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಮೃತ ದೇಹವು ಶುಕ್ರವಾರ ಪತ್ತೆಯಾಗಿದೆ.

ಶಿರ್ತಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಡುಕೊಣಾಜೆ ಗ್ರಾಮದ ಕೊಲ್ಲಂಗಾಲು ನಿವಾಸಿ ಗೋಕುಲ್ ನಾಯಕ್ ( 45ವ.) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.


ಹೆಂಡತಿ ಮತ್ತು ಇಬ್ಬರು ಮಕ್ಕಳು ಕಳೆದ ಮೂರು ವರ್ಷಗಳ ಹಿಂದೆಯೆ ಕಾರಣಾಂತರದಿಂದ ಗೋಕುಲು ಅವರ ಸಂಪರ್ಕದಿಂದ ಬೇರೆಯಾಗಿ ಬೆಳಗಾಂವಿನಲ್ಲಿದ್ದರು. ಕಳೆದ ಒಂದೂವರೆ ವರ್ಷಗಳವರೆಗೆ ಆಗೊಮ್ಮೆ ಈಗೊಮ್ಮೆ ಹೆಂಡ್ತಿ ಮಕ್ಕಳೊಂದಿಗೆ ಫೋನ್ ಕರೆಯಲ್ಲಿದ್ದ ಅವರು ನಂತರ ಸಂಪೂರ್ಣ ಮಾತು ಬಿಟ್ಟಿದ್ದರು ಎಂದು ತಿಳಿದು ಬಂದಿದೆ.

ಕಳೆದ ಮೂರು‌ ದಿನಗಳ ಹಿಂದೆ ಗೋಕುಲ್ ಅವರ ಹೆಂಡ್ತಿ ಜಯಂತಿ ಮತ್ತು ಮಕ್ಕಳು ಶಿರ್ತಾಡಿ ಕಜೆಯಲ್ಲಿರುವ ತನ್ನ ತಾಯಿ ಮನೆಗೆ ಬಂದಿದ್ದರು. ಈ ಸಂದರ್ಭದಲ್ಲಿ ಪುತ್ರ ಮತ್ತು ಆತನ ಮಾವನ ಮಗ ತಂದೆಯ ಮನೆಯ ಕಡೆಗೆ ಬಂದಿದ್ದು ಮನೆಗೆ ಬೀಗ ಹಾಕಿತ್ತು. ಸಹಜವೆಂಬಂತೆ ಮಕ್ಕಳಿಬ್ಬರು ಕಿಟಕಿಯ ಮೂಲಕ ಒಳಗೆ ಇಣುಕಿ ನೋಡಿದಾಗ ನೆಲದ ಮೇಲೆ ಮೃತ ದೇಹವು ಕಂಡು ಬಂದಿದ್ದು ತಕ್ಷಣ ಮಕ್ಕಳಿಬ್ಬರು ಮನೆಗೆ ಸುದ್ದಿ ತಿಳಿಸಿದ್ದಾರೆ. ನಂತರ ಮೂಡುಬಿದಿರೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.


ಶುಕ್ರವಾರದಂದು ಮೂಡುಬಿದಿರೆ ಪೊಲೀಸ್ ವೃತ್ತ ನಿರೀಕ್ಷಕ ದಿನೇಶ್ ಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿ ಮನೆಯ ಬೀಗ ಒಡೆದು ಒಳ ಪ್ರವೇಶಿಸಿ ನೋಡಿದಾಗ ಕೊಣೆಯ ನೆಲದ ಮೇಲೆ ಕುತ್ತಿಗೆಯಿಂದ ರುಂಡ ಬೇರೆಯಾಗಿರುವ ಮೃತ ದೇಹವಿದ್ದು ಮನೆಯ ಜಂತಿಯಲ್ಲಿ ನೇಣಿಗೆ ಉಪಯೋಗಿಸಲು ಕಟ್ಟಿದ ಸೀರೆಯು ಪತ್ತೆಯಾಗಿದೆ.

Leave A Reply

Your email address will not be published.