ಬಂಟ್ವಾಳ : ಪಾಂಡವರಕಲ್ಲು ಶ್ರೀ ಬ್ರಹ್ಮಬೈದೆರ್ಕಳ ಗರಡಿಗೆ ಒಡೆದ ಗಾಜಿನ ಚೂರು ಹಾಕಿದ ಕಿಡಿಗೇಡಿಗಳು ,ಕ್ರಮಕ್ಕೆ ಒತ್ತಾಯ

 

ಬಂಟ್ವಾಳ ತಾಲೂಕಿನ ಬಡಗಕಜೆಕಾರು ಗ್ರಾ.ಪಂ.ವ್ಯಾಪ್ತಿಯ ಪಾಂಡವರಕಲ್ಲು ಶ್ರೀ ಬ್ರಹ್ಮ ಬೈದರ್ಕಳ ಗರೊಡಿಯ ಅಂಗಣಕ್ಕೆ ದುಷ್ಕರ್ಮಿಗಳು ಗಾಜಿನ ಬಾಟಲ್ ಒಡೆದು ಗಾಜಿನ ಚೂರುಗಳನ್ನು ಹಾಕಿ ದುಷ್ಕೃತ್ಯ ನಡೆಸುದ ಘಟನೆ ಮೇ 14 ರಂದು ಬೆಳಕಿಗೆ ಬಂದಿದೆ.

ಘಟನೆಯ ಬಗ್ಗೆ ಮೇ 14 ರಂದು ರಾತ್ರಿ ಸಾರ್ವಜನಿಕರ ಗಮನಕ್ಕೆ ಬಂದಿದೆ.

ಇಲ್ಲಿ ಶ್ರೀ ಕೊಡಮಣಿತ್ತಾಯ , ಶ್ರೀ ಪಿಲಿಚಾಮುಂಡಿ ಮತ್ತು ಬ್ರಹ್ಮಬೈದೆರ್ಕಳ ದೈವಸ್ಥಾನವಿದ್ದು ಅದರ ಸುತ್ತಲೂ ಕಿಡಿಗೇಡಿಗಳು ಸುಮಾರು 20 ಕ್ಕೂಅಧಿಕ ಗಾಜಿನ ಬಾಟಲಿಗಳನ್ನು ಚೂರು‍ಚೂರಾಗು ವಂತೆ ಒಡೆದು ಹಾಕಿ ಗರಡಿಯೊಳಗೆ ಯಾರಿಗೂ ನಡೆದಾಡದಂತೆ ದುಷ್ಕೃತ್ಯ ನಡೆಸಿದ್ದಾರೆ.

ಶ್ರದ್ದ ಕೇಂದ್ರದಲ್ಲಿ ಇಂತಹ ದುಷ್ಕೃತ್ಯ ಮೆರೆದ ಕಿಡಿಗೇಡಿಗಳು ಯಾರೆಂಬುವುದನ್ನು ಅಲ್ಲಿನ ಕಾರಣಿಕ ದೈವಗಳಾದ ಕೊಡಮಣಿತ್ತಾಯ ಬ್ರಹ್ಮಬೈದೆರ್ಲು ಶೀಘ್ರವಾಗಿ ಸಾರ್ವಜನಿಕವಾಗಿ ತೋರಿಸಿ ಕೊಡಬೇಕು ಹಿಂದು ಸಮಾಜದ ಪರವಾಗಿ
ಸಮಿತಿ ಮೇ.16ರಂದು ದೇವಸ್ಥಾನದಲ್ಲಿ
ಪ್ರಾರ್ಥನೆ ನಡೆಯಲಿದೆ.

ಈ ಕುರಿತು ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಲಾಗುವುದು ಎಂದು ಸಮಿತಿಯ ಪ್ರಮುಖರು ತಿಳಿಸಿದ್ದು,ಈ ಘಟನೆಯನ್ನು ಹಿಂದೂ ಜಾಗರಣ ವೇದಿಕೆ ಖಂಡಿಸಿದೆ.

Leave A Reply

Your email address will not be published.