ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಗಳ 2 ನೆಯ ಡೋಸ್ ಪಡೆಯಲು ನಿಗದಿ ಮಾಡಿದ್ದ ಸಮಯಾವಧಿ ವಿಸ್ತರಣೆ
ಕೋವಿಶೀಲ್ಡ್ ಲಸಿಕೆಯ ಮೊದಲನೇ ಮತ್ತು ಎರಡನೇ ಡೋಸ್ ಲಸಿಕೆಯ ನಡುವಿನ ಅಂತರವನ್ನು ಸರ್ಕಾರ 12-16 ವಾರಕ್ಕೆ ಏರಿಸಿದೆ.
ಈ ಮೊದಲು 6 8 ವಾರವಿದ್ದ ಅಂತರವನ್ನು ತಜ್ಞರ ಶಿಫಾರಸಿನ ಮೇರೆಗೆ ಹೆಚ್ಚಿಸಲಾಗಿದೆ ಎನ್ನುತ್ತಿದ್ದಾರೆ. ಆದರೆ ವಾಸ್ತವವಾಗಿ ಲಸಿಕೆಯ ಅಭಾವವೇ ಅದಕ್ಕೆ ಕಾರಣ ಎನ್ನುವುದು ಸ್ಪಷ್ಟ. ಆದರೆ ಅದರಿಂದ ಯಾವುದೇ ಪ್ರತಿಕೂಲ ಪರಿಣಾಮಗಳಿಲ್ಲ ಎಂದು ತಜ್ಞರು ಹೇಳಿದ್ದಾರೆ.
ಅನೇಕ ರಾಷ್ಟ್ರಗಳಲ್ಲಿ ಕೋವಿಶೀಲ್ಡ್ ಬಳಕೆಯಲ್ಲಿದ್ದು, ಅಲ್ಲಿ ಡೋಸ್ ನಡುವಿನ ಅಂತರವನ್ನು 12-16 ವಾರಕ್ಕೆ ಏರಿಸಲಾಗಿದೆ. ಅದೇ ಹಿನ್ನೆಲೆಯಲ್ಲಿ ಭಾರತೀಯ ತಜ್ಞರೊಂದಿಗೆ ಚರ್ಚಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಭಾರತ್ ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್ ಲಸಿಕೆಯನ್ನು ಕೂಡ ಭಾರತದಲ್ಲಿ ನೀಡಲಾಗುತ್ತಿದ್ದು, ಅದರ ಡೋಸ್ ಅಂತರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
6 ವಾರದ ಒಳಗೆ ಕೊವ್ಯಾಕ್ಸಿನ್ 2 ನೇ ಡೋಸ್ ತೆಗೆದುಕೊಳ್ಳಬೇಕು.
ಕೋವಿಶೀಲ್ಡ್ ಲಸಿಕೆಯನ್ನು12 -16 ವಾರಗಳ ಒಳಗೆ ತೆಗೆದುಕೊಳ್ಳಬೇಕು.