ಸಿಎಂ ಮಾಜಿ ಮಾಧ್ಯಮ ಸಲಹೆಗಾರ, ಚುನಾವಣಾ ರಾಜಕೀಯದ ಅಂಕಿ-ಅಂಶಗಳ ಸರದಾರ ಮಹದೇವ್ ಪ್ರಕಾಶ್ ಕೊರೋನಾಗೆ ಬಲಿ

ರಾಜ್ಯದಲ್ಲಿ ಕೊರೊನಾ ಸೋಂಕಿಗೆ ಇದೀಗ ಹಿರಿಯ ಪತ್ರಕರ್ತ, ಸಿಎಂ ಮಾಜಿ ಮಾಧ್ಯಮ ಸಲಹೆಗಾರ, ಮಹದೇವ್ ಪ್ರಕಾಶ್ (65) ಬಲಿಯಾಗಿದ್ದಾರೆ.

 

ಕೊರೊನಾ ಧೃಡವಾದ ಹಿನ್ನೆಲೆ ಕಳೆದ 10 ದಿನಗಳ ಹಿಂದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಅವರಿಗೆ ಕೊರೊನಾ ಧೃಡವಾದ ಹಿನ್ನೆಲೆ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಇಂದು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಮಹದೇವ ಪ್ರಕಾಶ್ ಅವರು ಸಿಎಂ ಯಡಿಯೂರಪ್ಪನವರ ಮಾಧ್ಯಮ ಸಲಹೆಗಾರರಾಗಿದ್ದರು. ಚುನಾವಣಾ ರಾಜಕೀಯದ ಅಂಕಿಅಂಶಗಳ ಆಳ-ಅಗಲವನ್ನು ಬಲ್ಲ ವ್ಯಕ್ತಿಯಾಗಿದ್ದರು ಮಹದೇವ ಪ್ರಕಾಶ್.
ಇತ್ತೀಚೆಗೆ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದ್ದು ಆದರೆ ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರರಾಗಿದ್ದ ಕಾರಣ ಅವರು ಪ್ರಶಸ್ತಿಯನ್ನು ತಿರಸ್ಕರಿಸಿದ್ದರು.

Leave A Reply

Your email address will not be published.