ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾಕ್ ಡೌನ್ ನಿಯಮದಲ್ಲಿ ಮತ್ತೊಂದು ಬದಲಾವಣೆ !

ನ್ಯಾಯ ಬೆಲೆ ಅಂಗಡಿಗಳ ಮೂಲಕ ಪಡಿತರ ಪಡೆಯುವವರಿಗೆ ಸರಕಾರ ರಿಲೀಫ್ ನೀಡಿದೆ. ಆ ಮೂಲಕ ಕಳೆದ ಕೆಲವು ದಿನಗಳಿಂದ ಉಂಟಾಗಿದ್ದ ಗೊಂದಲಗಳಿಗೆ ತೆರೆ ಬಿದ್ದಂತಾಗಿದೆ. ಈ ಬಗ್ಗೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಸ್ಪಷ್ಟನೆ ನೀಡಿದ್ದಾರೆ.

 

ಜನರು ವಾಹನಗಳನ್ನು ಬಳಸಿಕೊಂಡು ಪಡಿತರ ಪಡೆಯಬಹುದುದಾಗಿದೆ. ಆದರೆ, ಬೆಳಗ್ಗೆ 10 ಗಂಟೆಯೊಳಗೆ ನ್ಯಾಯಬೆಲೆ ಅಂಗಡಿಗೆ ತಲುಪಬೇಕು ಎಂಬುದು ಒಂದು ಕಂಡೀಷನ್.

ಅಲ್ಲಿಗೆ 10 ಗಂಟೆಯೊಳಗೆ ತಲುಪಿದವರಿಗೆ 12 ಗಂಟೆಯ ತನಕ ಪಡಿತರ ವಿತರಣೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ನಿತ್ಯ ಒಂದು ನ್ಯಾಯಬೆಲೆ ಅಂಗಡಿಯಲ್ಲಿ 100 ಜನರಿಗೆ ಪಡಿತರ ವಿತರಣೆಗೆ ಸೂಚಿಸಲಾಗಿದೆ. ದ.ಕ. ಜಿಲ್ಲೆಯಲ್ಲಿ ವಾಹನವನ್ನು ಬಳಸಿಕೊಂಡು ರೇಷನ್ ಪಡೆಯಬಹುದು ಎಂಬುವುದಾಗಿ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಮಾಹಿತಿ ನೀಡಿದ್ದಾರೆ.

Leave A Reply

Your email address will not be published.