ಆದಿ ಚುಂಚನಗಿರಿ ಶಾಖಾ ಮಠ ಸ್ವಾಮೀಜಿ ಕೊರೋನಾಕ್ಕೆ ಬಲಿ

ಮೈಸೂರು: ಕೊರೋನಾ ಸೋಂಕು ನಿಯಂತ್ರಣಕ್ಕೆ ಸಿಗದೇ ಹರಡುತ್ತಿದೆ. ಆದಿ ಚುಂಚನಗಿರಿ ಸಂಸ್ಥಾನದ ಕೆ. ಆರ್ . ನಗರದ ಚುಂಚನಕಟ್ಟೆ ಶಾಖಾ ಮಠದ ಸ್ವಾಮೀಜಿ ಕೊರೋನಾದಿಂದ ಮೃತಪಟ್ಟಿದ್ದಾರೆ.

 

ಕೊರೋನಾ ಸೋಂಕಿತರಾಗಿದ್ದ ಹಿನ್ನೆಲೆಯಲ್ಲಿ ಶಿವಾನಂದ ನಾಥ ಸ್ವಾಮೀಜಿ ಅವರನ್ನು ಮಂಡ್ಯದ ಬೆಳ್ಳೂರು ಕ್ರಾಸ್ ನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರು ಎಳೆದಿದ್ದಾರೆ.

ಸ್ವಾಮಿಗಳ ನಿಧನಕ್ಕೆ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ ಹಾಗೂ ಅಪಾರ ಭಕ್ತವೃಂದದವರು ಕಂಬನಿ ಮಿಡಿದಿದ್ದಾರೆ.

Leave A Reply

Your email address will not be published.