ಸಿಇಟಿ ಪರೀಕ್ಷೆಗಳನ್ನು ಮುಂದೂಡಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಹತ್ವದ ಆದೇಶ
ಕೊರೊನಾ ವೈರಸ್ ಸೋಂಕು ಉಲ್ಬಣವಾಗುತ್ತಿರುವ ಹಿನ್ನೆಲೆಯಲ್ಲಿ ಸಿಇಟಿ ಪರೀಕ್ಷೆಗಳನ್ನು ಮುಂದೂಡಿಕೆ ಮಾಡಿ ಕೆಇಎ ಆದೇಶ ಹೊರಡಿಸಿದೆ.
ಬರುವ ಜೂನ್ ತಿಂಗಳ 7,8,9 ರಂದು ಸಿಇಟಿ ಪರೀಕ್ಷೆಗಳು ನಿಗದಿಯಂತೆ ನಡೆಯಬೇಕಿತ್ತು. ಆದರೆ ಕೋರೋನಾ ಸೋಂಕಿನ ಕಾಟದ ಹಿನ್ನೆಲೆಯಲ್ಲಿ ಮತ್ತು ಈಗಾಗಲೇ ಲಾಕ್ ಡೌನ್ ಇರುವ ಕಾರಣ ಉಂಟಾದ ಮುಂದಿನ ದಿನಗಳ ಅನಿಶ್ಚಿತತೆಯ ಕಾರಣ ಕೊಟ್ಟು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪರೀಕ್ಷೆಗಳನ್ನು ಮುಂದೂಡಿಕೆ ಮಾಡಿದೆ.
ಮುಂದಿನ ದಿನಾಂಕ ಆಗಸ್ಟ್ 28, 29, 30 ರಂದು ಪರೀಕ್ಷೆ ನಡೆಸುವುದುದಾಗಿ ತಿಳಿಸಿದೆ.
ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನ ಮುಂದೂಡಿಕೆ ಮಾಡಲಾಗಿತ್ತು. ಇದೀಗ ಸಿಇಟಿ ಪರೀಕ್ಷೆಯನ್ನೂ ಕೂಡ ಮುಂದೂಡಲಾಗಿದೆ.