ಹಾಟ್, ಹಾಟರ್, ಹಾಟೆಸ್ಟ್ | ‘ ತುಂಬು ವ್ಯಕ್ತಿತ್ವದ ‘ ಈ ನಟಿ ಬಾವಿಗೆ ಬಿದ್ದಾಗ !

ಹಾಟ್ ಹಾಟರ್ ಹಾಟೆಸ್ಟ್ ನಟಿ, ಬಹುಭಾಷಾ ತಾರೆ, ಫಡ್ಡೆ ಹುಡುಗರ ಹೃದಯ ಚೋರಿ, ‘ ತುಂಬು ವ್ಯಕ್ತಿತ್ವ’ ಉಳ್ಳ ಈ ನಟಿಯ ಸುದ್ದಿಗಾಗಿ ಇವತ್ತು ಇಡೀ ಇಂಟರ್ನೆಟ್ ಅನ್ನು ಜಾಲಾಡಲಾಗುತ್ತಿದೆ.

ಸದಾ ಸೆನ್ಸೆಷನ್ ಕ್ರಿಯೇಟ್ ಮಾಡುವ, ಹುಡುಗರಿಂದ ಹಿಡಿದು, ಅಂಕಲ್ ಗಳನ್ನೂ ದಾಟಿದ ವಯಸ್ಸಿನ ರಸಿಕರ ಮನದಲ್ಲಿ ಪರ್ಮನೆಂಟ್ ಸ್ಥಾನ ಪಡೆದಿರುವ ಸುಂದರಿ ನಟಿ ನಮಿತಾ ಬಾವಿಯಲ್ಲಿ ಬಿದ್ದ ಆಘಾತಕಾರಿ ಘಟನೆ ಮೊನ್ನೆ ನಡೆದಿತ್ತು. ಅದರ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಇಂಟರ್ನೆಟ್ ನಲ್ಲಿ ದೊಡ್ಡ ಸಂಚಲನೆ ಮೂಡಿತ್ತು. ಆಕೆಯ ಅಭಿಮಾನಿಗಳಲ್ಲಿ ದೊಡ್ಡ ಆತಂಕ. ಆಕೆಯ ಅಪಘಾತದ ಕುರಿತಾದ ವಿಚಾರಣೆಗೆ ಜನ ಇಂಟರ್ ನೆಟ್ ನಲ್ಲಿ ತಡಕಾಡಿದ್ದೇ ತಡಕಾಡಿದ್ದು.

ಯಾರು ಈ ನಮಿತಾ ?

ಮೂಲತಃ ತಮಿಳುನಾಡಿನ ಮೂಲದ ನಮಿತಾ ಬಹುಭಾಷಾ ನಟಿ. ನಾಯಕ ನಟಿಯಂತಹ ಮುಖದ ಸೌಂದರ್ಯವನ್ನು ಹೊಂದಿರುವ ಈಕೆಯ ಸೈಜ್ ನೋಡಿದವರು ಮೊದಲಿಗೆ ಬೆಚ್ಚಿ ಬಿದ್ದಿದ್ದರು. ಅಷ್ಟು ಧಡೂತಿ ದೇಹತೂಕ ಹೊಂದಿರುವ ಈಕೆ ಡ್ಯಾನ್ಸ್ ಗೆ ನಿಂತರೆ ಯಾವ ನಟಿಗೂ ಕಮ್ಮಿ ಇಲ್ಲದಂತೆ ಸ್ಟೆಪ್ ಹಾಕ ಬಳ್ಳಲು. ಚೆನ್ನಾಗಿ ನಟಿಸಬಲ್ಲಳು. ಆದರೆ ಮುಖ್ಯವಾಗಿ ಆಕೆಯನ್ನು ಜನ ಇಷ್ಟ ಪಡುತ್ತಿರುವುದು ಆಕೆಯ ತುಂಬಿ ತುಳುಕುವ ದೇಹ ಸೌಂದರ್ಯಕ್ಕಾಗಿ!

ಆಕೆಯ ವ್ಯಕ್ತಿತ್ವ ವಾಕ್ಯದಲ್ಲಿ ಹೇಳಿದರೆ ಅಷ್ಟು ಬೇಗ ನಿಮ್ಮ ಅಂದಾಜಿಗೆ ಸಿಗುವುದು ಕಷ್ಟ. ನೀವೇ ಒಮ್ಮೆ ಆಕೆಯನ್ನು ನೋಡಿಬಿಡಿ.

ಫೋಟೋ ನೋಡಿ ಶಾಕ್ ಆದ ನೆಟ್ಟಿಗರಿಗೆ ನಿರ್ದೇಶಕರೊಬ್ಬರು ಸರಿಯಾದ ಕ್ಲಾರಿಟಿ ನೀಡಿದ್ದಾರೆ. ನಮಿತಾ ಕಾಡಿನಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಅವರ ಮೊಬೈಲ್ ಫೋನ್ ಇನ್ನೇನು ಬಾವಿಯಲ್ಲಿ ಬೀಳುತ್ತದೆ : ಅವಷ್ಟರಲ್ಲಿ ಆ ದುಬಾರಿ ಮೊಬೈಲ್ ನ್ನು ಕಳೆದುಕೊಳ್ಳಲು ಇಷ್ಟಪಡದ ಈ ಸುಂದರಿ ಮೊಬೈಲ್ ಕ್ಯಾಚ್ ಮಾಡಲು ಹೋಗಿ ತಾವೇ ಬಾವಿಗೆ ಬಿದ್ದು ಬಿಡುತ್ತಾರೆ. ಬಾವಿಗೆ ಬಿದ್ದ ನಮಿತಾ ಸಹಾಯಕ್ಕಾಗಿ ಜೋರಾಗಿ ಕೂಗಿಕೊಳ್ಳುತ್ತಾರೆ. ಒಂದು ಫೋನ್ ಉಳಿಸಿಕೊಳ್ಳಲು ನಮಿತಾ ನಿಜವಾಗಿಯೂ ಬಾವಿಗೆ ಬಿದ್ದರೇ? ಎಂದು ಆತಂಕಗೊಂಡ ಅಭಿಮಾನಿಗಳಿಗೆ ನಿರ್ದೇಶಕ ಆರ್‌ಎಲ್ ರವಿ ಉತ್ತರ ನೀಡಿದ್ದಾರೆ.

ಅದು ‘ಬೌ ಬೌ’ ಚಿತ್ರದ ಚಿತ್ರೀಕರಣ, ನಿಜ ಜೀವನದಲ್ಲಿ ಬಾವಿಗೆ ಬಿದ್ದದ್ದು ಅಲ್ಲ ಅಂತ ಆಕೆಯ ಅಭಿಮಾನಿಗಳಿಗೆ ಅರ್ಥ ಆಗಲು ತುಂಬಾ ಸಮಯ ತೆಗೆದುಕೊಂಡಿತ್ತು. ಅದು ನಾಯಿ ‘ ಬೌ ಬೌ ‘ ಎನ್ನುತ್ತಾ ಓಡಿಸಿಕೊಂಡು ಬಂದಾಗ ಆಕೆ ತಪ್ಪಿಸಿಕೊಳ್ಳಲು ಹೋಗಿ ಬಾವಿಗೆ ಬಿದ್ದದ್ದು ಎಂಬ ಸುದ್ದಿ ಕೂಡ ಈ ಹಿಂದೆ ಹರಡಿತ್ತು.

ರೀಲ್ ಲೈಫ್ ಕಥೆಯನ್ನು ರಿಯಲ್ ಲೈಫ್ ಘಟನೆ ಎಂದುಕೊಂಡು ಅಭಿಮಾನಿಗಳು ನಮಿತಾಳ ಬಗ್ಗೆ ವಿಚಾರಿಸುತ್ತಿದ್ದಾರೆ.


Leave A Reply

Your email address will not be published.