ಮುಂಬೈಯಲ್ಲಿ ಪೊಲೀಸರು ಹೊಡೆಯುವ ವಿಡಿಯೋವನ್ನು ಕರ್ನಾಟಕದ ವಿಡಿಯೋ ಎಂದು ಹರಿಯಬಿಟ್ಟ ಕಾಂಗ್ರೆಸ್ ಕಾರ್ಯಕರ್ತೆಯನ್ನು ಅರೆಸ್ಟ್ ಮಾಡಿದ ಪೊಲೀಸರು
ಸೋಮವಾರ ಲಾಕ್ಡೌನ್ ಹಿನ್ನೆಲೆಯಲ್ಲಿ ಪೊಲೀಸರು ರಾಜ್ಯದ ಕೆಲವು ಕಡೆ ಜನರಿಗೆ ಮನಬಂದಂತೆ ಲಾಠಿ ಪ್ರಯೋಗವನ್ನು ಮಾಡಿದ್ದಾರೆ. ಈ ಬಗ್ಗೆ ವ್ಯಾಪಕವಾದಂತಹ ಆಕ್ರೋಶ ವ್ಯಕ್ತವಾಗಿತ್ತು.
ಇದರ ಮಧ್ಯೆ ಕಾಂಗ್ರೆಸ್ ಕಾರ್ಯಕರ್ತೆಯಾದ ಪದ್ಮಾ ಹರೀಶ್ ಎಂಬಾಕೆ ಒಂದು ವಿಡಿಯೋ ಹರಿಯಬಿಟ್ಟಿದ್ದಳು. ಆ ವಿಡಿಯೋದಲ್ಲಿ ಪೊಲೀಸರೆಲ್ಲಾ ಸುತ್ತುವರಿದು ವ್ಯಕ್ತಿಯೊಬ್ಬನನ್ನು ಥಳಿಸುತ್ತಿದ್ದ ದೃಶ್ಯ ಇದ್ದು, ಅದು ಲಾಕ್ ಡೌನ್ ಆದ ಸಂದರ್ಭ ಪೊಲೀಸರು ತೋರಿದ ವರ್ತನೆ ಎಂದು ತೋರಿಸಲಾಗಿದ್ದು ಆ ವಿಡಿಯೋ ವೈರಲ್ ಆಗಿತ್ತು.
ಸದರಿವಿಡಿಯೋ ಕರ್ನಾಟಕದ್ದು ಮತ್ತು ಇಲ್ಲಿನ ಪೊಲೀಸರು ದರ್ಪ ತೋರಿದ್ದಾರೆ ಎಂದು ಅವರು ವಿಡಿಯೋವನ್ನು ಪೋಸ್ಟ್ ಮಾಡಿದ್ದರು. ಇದನ್ನು ಸೂಕ್ಷ್ಮವಾಗಿ ಗಮನಿಸಿದ ರಾಜ್ಯ ಪೊಲೀಸರು ಇದು ರಾಜ್ಯದಲ್ಲಿ ನಡೆದಿರುವ ಘಟನೆ ಅಲ್ಲ. ಏಪ್ರಿಲ್ 3ರಂದು ಮುಂಬೈನಲ್ಲಿ ನಡೆದಿರುವ ಘಟನೆ. ಎಂದು ಪತ್ತೆಹಚ್ಚಿದ್ದರು. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ಪಂತ್ ಟ್ವಿಟರ್ ಮೂಲಕ ಸೂಚನೆ ನೀಡಿದ್ದರು. ಇದರಂತೆ ಕಾಂಗ್ರೆಸ್ ಕಾರ್ಯಕರ್ತೆಯನ್ನು ಅರೆಸ್ಟ್ ಮಾಡಲಾಗಿದೆ.
ಇದೀಗ ಈ ಕಾಂಗ್ರೆಸ್ ಕಾರ್ಯಕರ್ತೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಅವರೊಂದಿಗೆ ತೆಗೆಸಿಕೊಂಡಿರುವ ಫೋಟೋ ವೈರಲ್ ಆಗುತ್ತಿದೆ.