ಹಿಂದೂ ಮುಖಂಡ ಶರಣ್ ಪಂಪ್ವೆಲ್ಗೆ ಜೀವ ಬೆದರಿಕೆ
ಶವದ ಅಂತಿಮ ಸಂಸ್ಕಾರವನ್ನು ಅನ್ಯ ಸಮುದಾಯದವರು ಮಾಡುವ ಬಗ್ಗೆ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ವೆಲ್ ನೀಡಿದ ಹೇಳಿಕೆಯ ನಂತರ ಅವರಿಗೆ ವಿದೇಶದಿಂದ ಜೀವ ಬೆದರಿಕೆ ಕರೆಗಳು ಬರುತ್ತಿದೆ. ಈ ಕುರಿತು ಶರಣ್ ಪಂಪ್ವೆಲ್ ಪೊಲೀಸರಿಗೆ ದೂರು ನೀಡಿದ್ದಾರೆ.
ಅಂತ್ಯಸಂಸ್ಕಾರವನ್ನು ಅನ್ಯ ಸಮುದಾಯದವರು ಮಾಡುವ ಅಗತ್ಯವಿಲ್ಲ. ಕರಾವಳಿಯಲ್ಲಿ ಹಿಂದೂ ಸಂಪ್ರದಾಯದಂತೆ ಅಂತ್ಯಸಂಸ್ಕಾರ ಮಾಡುವವರಿದ್ದಾರೆ ಎಂದು ಶರಣ್ ಪಂಪ್ವೆಲ್ ಹೇಳಿದ್ದರು.
ಈ ಹೇಳಿಕೆಯ ಪೋಸ್ಟರ್ ವೈರಲ್ ಆಗಿ ಸಾಮಾಜಿಕ ಜಾಲತಾಣಗಳಲ್ಲಿ ಪರ, ವಿರೋಧ ಚರ್ಚೆಗಳೂ ನಡೆದಿತ್ತು.
ಕಳೆದ ಎರಡು ದಿನಗಳಿಂದ ಶರಣ್ ಪಂಪ್ವೆಲ್ಗೆ ವಿದೇಶದಿಂದ ಇಂಟರ್ನೆಟ್ ಕಾಲ್ ಮತ್ತು ಫೋನ್ ಮೂಲಕ ಜೀವ ಬೆದರಿಕೆ ಕರೆಗಳು ಬರಲು ಆರಂಭವಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಅಪಪ್ರಚಾರದ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಅವರು ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.